ಸೋಮವಾರಪೇಟೆ: ಇಲ್ಲಿನ ವೀರಶೈವ ಸಮಾಜದಿಂದ ಬಸವ ಜಯಂತಿ ಪ್ರಯುಕ್ತ ವಿರಕ್ತ ಮಠದ ಆವರಣದಲ್ಲಿ ಈಚೆಗೆ ಬಸವಜಯಂತಿ ಆಚರಣೆ ಹಾಗೂ ವಚನಗಾಯನ ನಡೆಯಿತು.
ವಿರಕ್ತ ಮಠದ ಆವರಣದಿಂದ ಪ್ರಭಾತಭೇರಿ ಹೊರಟು ಕಕ್ಕೆಹೊಳೆ ಬಳಿ ಇರುವ ಬಸವೇಶ್ವರ ಪ್ರತಿಮೆಗೆ ಹಾರ ಹಾಕಿ, ಪೂಜೆ ಮಾಡಲಾಯಿತು. ಬಸವೇಶ್ವರ ದೇವಾಲಯದಲ್ಲಿ ಪೂಜೆ, ಮಹಾಮಂಗಳಾರತಿ ನಡೆಯಿತು. ಬಸವೇಶ್ವರ ಯುವಕ ಸಂಘದಿಂದ ಸಂಜೆ ಸಮಾಜದವರಿಗೆ ವಚನ ಗಾಯನ ನಡೆಯಿತು.
ವಿರಕ್ತ ಮಠದ ನಿಶ್ಚಲ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಭೆಯ ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಕೆ.ಜೆ. ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಗಳಾಗಿ ವೀರಶೈವ ಸಮಾಜದ ಪ್ರಮುಖರಾದ ಬಿ.ಪಿ. ಶಿವಕುಮಾರ್, ಬಿ.ಆರ್. ಮೃತ್ಯುಂಜಯ, ಅಕ್ಕನ ಬಳಗದ ಉಪಾಧ್ಯಕ್ಷೆ ಸರಿತಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.