ADVERTISEMENT

ಸೋಮವಾರಪೇಟೆ | ಕಬಡ್ಡಿ: ಸತ್ಯ ಸ್ಪೋರ್ಟ್ಸ್ ಕ್ಲಬ್ ಪ್ರಥಮ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 7:19 IST
Last Updated 28 ಜನವರಿ 2026, 7:19 IST
ಸೋಮವಾರಪೇಟೆ ಇಂದಿರಾಗಾಂಧಿ ಅಭಿಮಾನಿಗಳ ಸಂಘದಿಂದ ಭಾನುವಾರ ನಡೆದ ರಾಜ್ಯಮಟ್ಟದ ಬೆಳ್ಳಿ ಬಟ್ಟಲಿನ ಕಬಡ್ಡಿ ಟೂರ್ನಿಯಲ್ಲಿ ಸೋಮವಾರಪೇಟೆಯ ಸತ್ಯ ಸ್ಪೋರ್ಟ್ಸ್ ಕ್ಲಬ್ ಪ್ರಥಮ ಬಹುಮಾನ ಪಡೆಯಿತು
ಸೋಮವಾರಪೇಟೆ ಇಂದಿರಾಗಾಂಧಿ ಅಭಿಮಾನಿಗಳ ಸಂಘದಿಂದ ಭಾನುವಾರ ನಡೆದ ರಾಜ್ಯಮಟ್ಟದ ಬೆಳ್ಳಿ ಬಟ್ಟಲಿನ ಕಬಡ್ಡಿ ಟೂರ್ನಿಯಲ್ಲಿ ಸೋಮವಾರಪೇಟೆಯ ಸತ್ಯ ಸ್ಪೋರ್ಟ್ಸ್ ಕ್ಲಬ್ ಪ್ರಥಮ ಬಹುಮಾನ ಪಡೆಯಿತು   

ಸೋಮವಾರಪೇಟೆ: ಇಂದಿರಾಗಾಂಧಿ ಅಭಿಮಾನಿಗಳ ಸಂಘದಿಂದ ಸಾಕಮ್ಮನ ಬಂಗಲೆ ಮುಂಭಾಗದ ಮೈದಾನದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಬೆಳ್ಳಿ ಬಟ್ಟಲಿನ ಕಬಡ್ಡಿ ಟೂರ್ನಿಯಲ್ಲಿ ಸೋಮವಾರಪೇಟೆಯ ಸತ್ಯ ಸ್ಪೋರ್ಟ್ಸ್ ಕ್ಲಬ್ ಪ್ರಥಮ, ರಾಮದೂತ ತಂಡ ದ್ವಿತೀಯ ಹಾಗೂ ಜೀವನ್ ಫ್ರೆಂಡ್ಸ್ ತಂಡ ತೃತೀಯ ಸ್ಥಾನ ಪಡೆದವು.

ಈ ಮೂರು ತಂಡಗಳಿಗೆ ಕ್ರಮವಾಗಿ ₹15,000, ₹8000 ಹಾಗೂ ₹3,000 ಹಾಗೂ ಟ್ರೋಫಿಯನ್ನು ವಿತರಿಸಲಾಯಿತು.

ಟೂರ್ನಿಯಲ್ಲಿ ಸೋಮವಾರಪೇಟೆಯ ಜಿಎಂಪಿ ಶಾಲೆ ಬಿ.ತಂಡ ಪ್ರಥಮ, ಓಎಲ್‌ವಿ ಶಾಲೆ ದ್ವಿತೀಯ, ಜಿ.ಎಂ.ಪಿ. ಶಾಲೆ ಎ. ತಂಡ ತೃತೀಯ ಸ್ಥಾನ ಪಡೆದವು.

ADVERTISEMENT

ಕಾಲೇಜು ವಿಭಾಗದ ಸ್ಪರ್ಧೆಯಲ್ಲಿ ಸತ್ಯ ಸ್ಪೋರ್ಟ್ಸ್ ಕ್ಲಬ್ ಪ್ರಥಮ, ಶನಿವಾರಸಂತೆಯ ವಾರಿಯರ್ಸ್ ದ್ವಿತೀಯ, ಸೋಮವಾರಪೇಟೆ ಸರ್ಕಾರಿ ಪಿಯು ಕಾಲೇಜು ತೃತೀಯ ಸ್ಥಾನ ಗಳಿಸಿದವು.

ತಡರಾತ್ರಿ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಒಕ್ಕಲಿಗರ ಯುವ ವೇದಿಕೆ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ, ಪ್ರಮುಖರಾದ ಗೌಡಳ್ಳಿ ಪೃಥ್ವಿ, ಪ್ರವೀಣ್, ಸಂತೋಷ್ ಅವರುಗಳು ಭಾಗವಹಿಸಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಿದರು.

ಸಂಘದ ಅಧ್ಯಕ್ಷ ಎಚ್.ಎ. ನಾಗರಾಜು, ಪದಾಧಿಕಾರಿಗಳಾದ ಜಗದೀಶ್, ರವೀಂದ್ರ, ಮಣಿಕಂಠ ಎಚ್.ಎನ್., ರಾಜಪ್ಪ, ಮಲ್ಲೇಶ್, ಎಸ್.ಆರ್. ರವಿ, ಎಂ. ನಾಗರಾಜು ಹಾಗೂ ಅಜೇಯ ಹಾಜರಿದ್ದರು.

ಸೋಮವಾರಪೇಟೆ ಇಂದಿರಾಗಾಂಧಿ ಅಭಿಮಾನಿಗಳ ಸಂಘದಿಂದ ಸಾಕಮ್ಮನ ಬಂಗಲೆ ಮುಂಭಾಗದ ಮೈದಾನದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಬೆಳ್ಳಿ ಬಟ್ಟಲಿನ ಕಬಡ್ಡಿ ಪಂದ್ಯಾಟದಲ್ಲಿ ರಾಮದೂತ ತಂಡ ದ್ವಿತೀಯ ಬಹುಮಾನ ಪಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.