ಸೋಮವಾರಪೇಟೆ: ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿರುವ ಚಳಿಗಾಲದ ದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಐಸ್ ಹಾಕಿಯಲ್ಲಿ ಜಿಲ್ಲೆಯ ವಿದ್ಯಾರ್ಥಿನಿ ಪಿ.ಎಸ್.ಆರ್ಯ ತನ್ನದೇ ಛಾಪನ್ನು ಮೂಡಿಸಿದ್ದಾಳೆ.
ಹಿಮದಿಂದ ಆವರಿಸಿದ ಮೈದಾನದಲ್ಲಿ ನಡೆಯುವ ಈ ಕ್ರೀಡೆಯಲ್ಲಿ ಆರ್ಯ ತನ್ನ ವೇಗ, ಶೌರ್ಯ ಹಾಗೂ ಕೌಶಲ್ಯಗಳಿಂದ ಯಶಸ್ಸಿನ ಹಾದಿಯಲ್ಲಿದ್ದಾಳೆ. ಬ್ಯಾಂಡಿ ಅಸೊಸಿಯೇಷನ್ ಆಫ್ ಇಂಡಿಯಾ ಸಂಸ್ಥೆಯಿಂದ ನಡೆಯುವ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದಾಳೆ.
ಕಳೆದ ವರ್ಷ ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಆಯ್ಕೆ ಶಿಬಿರದಲ್ಲಿ ಭಾಗವಹಿಸಿ 16 ವರ್ಷದೊಳಗಿನ ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಳು. ನಂತರ ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ ನಡೆದ 6ನೇ ಬ್ಯಾಂಡಿ ನ್ಯಾಷನಲ್ ಚಾಂಪಿಯನ್‌ಷಿಪ್‌ನಲ್ಲಿ, ಕರ್ನಾಟಕ ಬ್ಯಾಂಡಿ ಅಸೋಸಿಯೇಷನ್‌ನ ರಾಜ್ಯದ 16 ವರ್ಷದೊಳಗಿನ ಬಾಲಕಿಯರ ತಂಡದ ಉಪ ನಾಯಕಿಯಾಗಿ ಕಂಚಿನ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ.
ಐಸ್ ಹಾಕಿ ತಂಡದಲ್ಲಿ 6 ಮಂದಿ ಆಟಗಾರರು ಇರುತ್ತಾರೆ. ಸ್ಕೇಟ್‌ಗಳನ್ನು ಧರಿಸಿ, ಸ್ಟಿಕ್‌ಗಳ ಸಹಾಯದಿಂದ ಎದುರಾಳಿ ತಂಡದ ಗೋಲು ಪೋಲಿಗೆ ಹೊಡೆಯಬೇಕಿದೆ. ಅದು ವೇಗ, ತಂತ್ರ ಮತ್ತು ಸಾಮೂಹಿಕ ಶಕ್ತಿಯ ಮೂಲಕ ಸಾಧಿಸಬೇಕಿದೆ. ಇದು ಮೂರು ಅವಧಿಗಳಲ್ಲಿ ನಡೆಯುವ ಆಟದಲ್ಲಿ ಹೆಚ್ಚು ಅಂಕ ಗಳಿಸಿದ ತಂಡ ವಿಜೇತರಾಗುತ್ತಾರೆ.
ಕಳೆದ 9 ವರ್ಷದಿಂದ ನೃತ್ಯ, ಭರತನಾಟ್ಯ, ಕರಾಟೆಗಳಲ್ಲೂ ಅಭ್ಯಾಸ ನಡೆಸುತ್ತಿದ್ದು, ಭರತನಾಟ್ಯ, ವೆಸ್ಟರ್ನ್ ಡ್ಯಾನ್ಸ್ ಹಾಗೂ ಸ್ಟೇಟಿಂಗ್ ಡ್ಯಾನ್ಸ್‌ನಲ್ಲಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪುರಸ್ಕಾರ ಪಡೆದುಕೊಂಡಿರುವುದು ಇವಳ ಸಾಧನೆಗೆ ಕೈಗನ್ನಡಿಯಾಗಿದೆ. ಇದಲ್ಲದೆ ಛದ್ಮವೇಷ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಿದ್ದು, ಶಾಲಾ ಎನ್.ಸಿ.ಸಿ. ತಂಡದಲ್ಲೂ ಸಕ್ರಿಯಳಾಗಿದ್ದಾಳೆ.
ಥೈಲ್ಯಾಂಡ್‌ನಲ್ಲಿ ಬ್ಯಾಂಡಿ ಅಸೋಷಿಯೇಷನ್ ಇಂಡಿಯಾ ವತಿಯಿಂದ ನಡೆದ 5ನೇ ಇಂಟರ್ ನ್ಯಾಷನಲ್ ಕ್ಯಾಂಪ್‌ನಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ತೋರಿದ್ದಾಳೆ. ಬೆಂಗಳೂರಿನಲ್ಲಿ ನಡೆದ ಶಾಲಾ ಮಕ್ಕಳ ಮಟ್ಟದ ಸ್ಟೇಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿ ಬೆಳ್ಳಿಯ ಪದಕ ಪಡೆದಿದ್ದಾಳೆ. ಇದರೊಂದಿಗೆ ಕ್ರೀಡೆ ಹಾಗೂ ನೃತ್ಯದೊಂದಿಗೆ ಸಮರ ಕಲೆಯಾದ ಕರಾಟೆ ತರಬೇತಿಯನ್ನೂ ಪಡೆಯುತ್ತಿದ್ದಾಳೆ.
ಇವಳು ಕುಶಾಲನಗರ ತಾಲ್ಲೂಕಿನ ಮಾದಾಪಟ್ಟಣ ಗ್ರಾಮದ ನಿವಾಸಿ ಪಿ.ಎಂ.ಸುನೀಲ್ ಕುಮಾರ್, ಮತ್ತು ಶೃತಿ ಅವರ ಮಗಳಾದ ಪಿ.ಎಸ್.ಆರ್ಯ, ಕುಶಾಲನಗರದ ಅತ್ತೂರು ಗ್ರಾಮದಲ್ಲಿರುವ ಜ್ಞಾನಗಂಗಾ ವಸತಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾಳೆ.
ಕ್ರೀಡೆಯ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಭಾಗಿ ನೃತ್ಯ, ಸ್ಕೇಟಿಂಗ್ ಸ್ಪರ್ಧೇಗಳಲ್ಲೂ ಮುಂದು ಬಾಲ್ಯದಲ್ಲೇ ಹಲವು ಪ್ರಶಸ್ತಿಗಳಿಗೆ ಭಾಜನಳಾದ ವಿದ್ಯಾರ್ಥಿನಿ
ಚಿಕ್ಕ ವಯಸ್ಸಿನಿಂದಲೇ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿದ್ದುದ್ದರಿಂದ ನಾವು ಅವಳಿಗೆ ತರಬೇತಿಗಳನ್ನು ಕೊಡಿಸುವ ಮೂಲಕ ಉತ್ತೇಜನ ನೀಡುತ್ತಿದ್ದೇವೆ.ಪಿ.ಎಂ.ಸುನೀಲ್ ಕುಮಾರ್ ಬಾಲಕಿ ಆರ್ಯಳ ತಂದೆ.
ಪಡೆದ ಪದಕ ಗೌರವಗಳು ಇಂಡಿಯನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯಿಂದ ಡ್ಯಾನ್ಸ್ ಟ್ಯಾಲೆಂಟ್ ಶೋ-2023 ರಲ್ಲಿ ಭಾಗವಹಿಸಿ ಪ್ರಶಸ್ತಿಗೆ ಪಾತ್ರಳಾಗಿದ್ದಾಳೆ. ಇದರೊಂದಿಗೆ ರಾಷ್ಟ್ರೀಯ ಅಖಿಲ ಭಾರತ ನಾಟ್ಯೋತ್ಸವದಲ್ಲಿ ಭಾಗವಹಿಸಿ ರಾಷ್ಟ್ರೀಯ ನಾಟ್ಯ ಕಲಾ ನಿಧಿ ಪ್ರಶಸ್ತಿಯನ್ನು ಪಡೆದಿದ್ದಾಳೆ. ಕೊಡಗು ಟ್ಯಾಲೆಂಟ್ ಚಾಂಪಿಯನ್‌ಷಿಒಪ್‌ನಲ್ಲಿ ಭಾಗವಹಿಸಿ ಕೊಡಗು ಟ್ಯಾಲೆಂಟ್ ಅವಾರ್ಡ್ ಪ್ರಶಸ್ತಿ ರಾಬಾ ಮೀಡಿಯಾ ವತಿಯಿಂದ ತಮಿಳುನಾಡಿನಲ್ಲಿ ನಡೆದ ರಾಷ್ಟ್ರಮಟ್ಟದ ನೃತ್ಯ ಸರ್ಧೆಯಲ್ಲಿ ಜಾಕಿ ಅವಾರ್ಡ್-2022 ಟ್ಯಾಲೆಂಟ್ ಐಕಾನ್ ಪ್ರಶಸ್ತಿ ಪಡೆದಿದ್ದಾಳೆ. ಚೆನ್ನೈನಲ್ಲಿ ರಾಬಾ ಮೀಡಿಯಾ ವತಿಯಿಂದ ನಡೆದ ಪ್ಯೂಷನ್ ಮತ್ತು ಡಾನ್ಸ್ ಸ್ಟೇಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಸ್ಟೇಟಿಂಗ್ ನೃತ್ಯದಲ್ಲಿ ಲೋಗ ಕಲಾ ನಿಧಿಸ್ಪೆಷಲ್ ಟೈಟಲ್ ಅವಾರ್ಡ್ ಥೈಲ್ಯಾಂಡ್‌ನಲ್ಲಿ ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಕಲ್ಟರ್ ಅಂಡ್ ಮ್ಯಾನೇಜ್‌ಮೆಂಟ್ ಸಂಸ್ಥೆ ಆಯೋಜಿಸಿದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಗ್ಲೋಬಲ್ ಸ್ಟಾರ್ -2023 ಸ್ಪೆಷಲ್ ಟೈಟಲ್‌ನೊಂದಿಗೆ ಪ್ರಶಸ್ತಿ ರಾಷ್ಟ್ರೀಯ ಬ್ಯಾಂಡಿ ಚಾಂಪಿಯನ್‌ಷಿಪ್ ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಕಂಚಿನ ಪದಕ ಗೋವಾದಲ್ಲಿ ನಡೆದ 2ನೇ ಸುತ್ತಿನ ಪಂದ್ಯಾವಳಿಗೆ ಆಯ್ಕೆ ಥೈಲ್ಯಾಂಡ್‌ನಲ್ಲಿ ನಡೆದ ಅಂತರರಾಷ್ಟ್ರೀಯ 2025 ಬ್ಯಾಂಡಿ ಕ್ಯಾಂಪ್‌ನಲ್ಲಿ ಆಯೋಜಿಸಿರುವ ಪಂದ್ಯಾವಳಿಗಳು ಮತ್ತು ಅಂತರರಾಷ್ಟ್ರೀಯ ಮಟ್ಟದ ಕೋಚ್‌ಗಳಿಂದ ಉನ್ನತ ತರಬೇತಿ ಪಡೆಯಲು ಆಯ್ಕೆಯಾಗಿದ್ದಾಳೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.