ಸುಂಟಿಕೊಪ್ಪ: ವಾರಾಂತ್ಯ ಮತ್ತು ಮಕ್ಕಳಿಗೆ ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ರಜಾದಿನವನ್ನು ಕಳೆಯಲು ಕೊಡಗಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರಯತ್ತಿರುವುದರಿಂದ ಸಂತೆ ದಿನವಾದ ಭಾನುವಾರ ಸುಂಟಿಕೊಪ್ಪದಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದರಿಂದ ಸ್ಥಳೀಯರು, ಪಾದಚಾರಿಗಳು ಮುಂದೆ ಸಾಗಲು ಪರದಾಡುವಂತಾಯಿತು.
ಹೊರ ಜಿಲ್ಲೆ, ಹೊರ ರಾಜ್ಯಗಳ ಪ್ರವಾಸಿಗರು ಆಗಮಿಸಿದ್ದರಿಂದ ರಾಷ್ಟ್ರೀಯ ಹೆದ್ದಾರಿ 275 ಟ್ರಾಫಿಕ್ ಸಮಸ್ಯೆ ಉಂಟಾಯಿತು.
ಸುಂಟಿಕೊಪ್ಪದಲ್ಲಿ ಭಾನುವಾರ ಸಂತೆ ಇರುವುದರಿಂದ ಗ್ರಾಹಕರ ಮತ್ತು ವ್ಯಾಪಾರಿಗಳ ವಾಹನಗಳ ಜೊತೆಯಲ್ಲಿ ಪ್ರವಾಸಿಗರ ವಾಹನದಿಂದ ಜನ ಮಾತ್ರ ಹೈರಾಣಾದರು.
ರಸ್ತೆ ದಾಟಲು ತಾಸುಗಟ್ಟಲೇ ಕಾಯುವ ಸ್ಥಿತಿ ಎದುರಾಯಿತು. ಸಣ್ಣ ಮಕ್ಕಳನ್ನು ಹಿಡಿದುಕೊಂಡಿದ್ದ ಮಹಿಳೆಯರಂತೂ ಮುಂದೆ ಸಾಗಲು ಸಾಹಸ ಮಾಡುವಂತಾಗಿತ್ತು.
ಸಾಲುಗಟ್ಟಲೇ ವಾಹನ ದಟ್ಟಣೆಯಿಂದ ಜನತೆಗೆ ಕಿರಿಕಿರಿಯಾಗಿತ್ತು. ಶನಿವಾರ ಮಧ್ಯಾಹ್ನವೇ ಶುರುವಾದ ವಾಹನಗಳ ದಟ್ಟಣೆ ಭಾನುವಾರವಂತೂ ಅದರ ಪ್ರಮಾಣ ಇನ್ನೂ ಹೆಚ್ಚಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.