ಪ್ರಾತಿನಿಧಿಕ ಚಿತ್ರ
ಕುಶಾಲನಗರ: ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಪಟ್ಟಣದ ಸಂಚಾರ ಪೊಲೀಸ್ ಠಾಣೆ ವತಿಯಿಂದ ಕಾರ್ಯಾಚರಣೆ ತೀವ್ರಗೊಳಿಸಲಾಗಿದ್ದು, ₹1.07 ಲಕ್ಷ ದಂಡ ವಿಧಿಸಲಾಗಿದೆ.
ಶುಕ್ರವಾರ ಅಪ್ರಾಪ್ತರು ವಾಹನ ಚಾಲನೆ ಮಾಡಿದ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಡಿ.ಎಂ.ವಿನೋದ್, ಪಿ.ಕೆ.ರಾಜೇಶ್ ಹಾಗೂ ಸುಭಾಷ್ ಚಂದ್ರ ಎಂಬ ಮೂವರಿಗೆ ದಂಡ ಹಾಕಲಾಗಿದೆ. ಎರಡು ದಿನಗಳಲ್ಲಿ ಪಾನಮತ್ತ ಹಾಗೂ ಕಾರಿನ ಸೈಲೆನ್ಸರ್ ಪರಿವರ್ತಿಸಿದ ಮೂರು ಪ್ರಕರಣಗಳಲ್ಲಿ ರಿಜ್ವಾನ್, ಅಜಿನಾಸ್, ಫಾಜಿಲ್ ಖಾನ್ ಎಂಬವರಿಗೆ ಒಟ್ಟು ₹31 ಸಾವಿರ ದಂಡ ವಿಧಿಸಲಾಗಿದೆ.
ವಾಹನ ಚಾಲನೆಗೆ ಪೋಷಕರು ಬಾಲಕ, ಬಾಲಕಿಯರಿಗೆ ಅವಕಾಶ ನೀಡಬಾರದು, ಜನರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಂಚಾರ ಠಾಣಾಧಿಕಾರಿ ಗಣೇಶ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.