ADVERTISEMENT

ಮಡಿಕೇರಿ | ಕೃತಕ ಬುದ್ಧಿಮತ್ತೆ ತರಬೇತಿ ಅಗತ್ಯ: ಜಿ.ರಾಜೇಂದ್ರ

ಕೊಡಗು ಪ್ರೆಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2024, 4:51 IST
Last Updated 23 ಸೆಪ್ಟೆಂಬರ್ 2024, 4:51 IST
<div class="paragraphs"><p>ಮಡಿಕೇರಿ ಹೊರವಲಯದ ‘ಕ್ಯಾಪಿಟಲ್ ವಿಲೇಜ್’ ಸಭಾಂಗಣದಲ್ಲಿ 2024-27ನೇ ಸಾಲಿನ ಕೊಡಗು ಪ್ರೆಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು&nbsp;ಪತ್ರಿಕೋದ್ಯಮಿ ಜಿ.ರಾಜೇಂದ್ರ ಉದ್ಘಾಟಿಸಿದರು.</p></div>

ಮಡಿಕೇರಿ ಹೊರವಲಯದ ‘ಕ್ಯಾಪಿಟಲ್ ವಿಲೇಜ್’ ಸಭಾಂಗಣದಲ್ಲಿ 2024-27ನೇ ಸಾಲಿನ ಕೊಡಗು ಪ್ರೆಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಪತ್ರಿಕೋದ್ಯಮಿ ಜಿ.ರಾಜೇಂದ್ರ ಉದ್ಘಾಟಿಸಿದರು.

   

ಮಡಿಕೇರಿ: ‘ಕೃತಕ ಬುದ್ಧಿಮತ್ತೆ ಪ್ರವರ್ಧಮಾನಕ್ಕೆ ಬರುತ್ತಿದ್ದು, ಈ ಬಗ್ಗೆ ಪತ್ರಕರ್ತರಿಗೆ ತರಬೇತಿ ಶಿಬಿರಗಳು ನಡೆಯಬೇಕು’ ಎಂದು ಪತ್ರಿಕೋದ್ಯಮಿ ಜಿ.ರಾಜೇಂದ್ರ ತಿಳಿಸಿದರು.

ನಗರದ ಹೊರವಲಯದ ‘ಕ್ಯಾಪಿಟಲ್ ವಿಲೇಜ್’ ಸಭಾಂಗಣದಲ್ಲಿ 2024-27ನೇ ಸಾಲಿನ ಕೊಡಗು ಪ್ರೆಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ಜನಪರ ಕಾಳಜಿ ಇರುವ ಪತ್ರಕರ್ತರ ಬೆನ್ನಿಗೆ ನಾವು ನಿಲ್ಲಬೇಕು. ಇದಕ್ಕೆ ಸಂಘಟನಾತ್ಮಕ ನಡೆ ಅನುಸರಿಸಬೇಕಾದ ಅನಿವಾರ್ಯತೆ ಇದೆ’ ಎಂದು ಪ್ರತಿಪಾದಿಸಿದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ‘ಪತ್ರಕರ್ತರ ಮೇಲಿನ ಗೌರವ ಕಡಿಮೆಯಾಗುತ್ತಿರುವುದು ಆತಂಕಕಾರಿ. ಅವರು ಸಂಘಟನಾತ್ಮಕವಾಗಿ ಮುಂದುವರೆಯಬೇಕಾದ ಅನಿವಾರ್ಯತೆ ಇದೆ’ ಎಂದು ತಿಳಿಸಿದರು.

ನೂತನ ಪದಾಧಿಕಾರಿಗಳಿಗೆ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರತಿಜ್ಞಾವಿಧಿ ಬೋಧಿಸಿದರು.

ನೂತನ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಪ್ರಧಾನ ಕಾರ್ಯದರ್ಶಿ ಆದರ್ಶ್ ಅದ್ಕಲೇಗಾರ್, ಹಿರಿಯ ಉಪಾಧ್ಯಕ್ಷ ನವೀನ್ ಡಿಸೋಜ, ಉಪಾಧ್ಯಕ್ಷೆ ವನಿತಾ ಚಂದ್ರಮೋಹನ್, ಖಜಾಂಚಿ ಸಿ.ಪಿ.ತೇಜಸ್, ಸಂಘಟನಾ ಕಾರ್ಯದರ್ಶಿ ಕೆ.ಜೆ.ಶಿವರಾಜ್, ಸಹಕಾರ್ಯದರ್ಶಿ ವಿ.ವಿ.ಅರುಣ್ ಕುಮಾರ್, ನಿರ್ದೇಶಕರಾಗಿ ಕೆ.ಎಂ.ವಿನೋದ್, ಮಾಗುಲು ಲೋಹಿತ್, ಕೆ.ಎಂ.ಇಸ್ಮಾಯಿಲ್ ಕಂಡಕೆರೆ, ಲೋಕೇಶ್ ಕಾಟಕೇರಿ, ಬಿ.ಜಿ.ಮಂಜು, ಅಜ್ಜಮಾಡ ರಮೇಶ್ ಕುಟ್ಟಪ್ಪ, ಬಿ.ಆರ್.ಸವಿತಾ ರೈ, ಮಚ್ಚಮಾಡ ಅನಿಶ್ ಮಾದಪ್ಪ ಅಧಿಕಾರ ಸ್ವೀಕರಿಸಿದರು.

ಪತ್ರಕರ್ತರಾದ ಪ್ರಜ್ಞಾ ರಾಜೇಂದ್, ಆನಂದ್ ಕೊಡಗು, ಕೆ.ಜಿ.ಶಿವರಾಜು, ತೇಜಸ್ ಪಾಪಯ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.