ADVERTISEMENT

ಕೇರಳದಿಂದ ಕಸ ತಂದು ರಾಜ್ಯದ ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿದ್ದ ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 4:27 IST
Last Updated 1 ಫೆಬ್ರುವರಿ 2023, 4:27 IST
   

ಮಡಿಕೇರಿ: ಕೇರಳದಿಂದ ಕಸ ತಂದು ಇಲ್ಲಿನ ಮಾಕುಟ್ಟ ಸಮೀಪದ ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ತಡರಾತ್ರಿ ಬಂಧಿಸಿದ್ದಾರೆ.

ಪೆಂಚಾಳಯ್ಯ ಹಾಗೂ ಶೀನ ಬಂಧಿತರು.

ಇವರು ಆಂಧ್ರಪ್ರದೇಶದಿಂದ ಸರಕುಗಳನ್ನು ಕೇರಳಕ್ಕೆ ಸಾಗಿಸಿ ವಾಪಸ್ ಬರುತ್ತಿದ್ದ ಖಾಲಿ ವಾಹನದಲ್ಲಿ 15 ಮೂಟೆ ಕಸವನ್ನು ತೆಗೆದುಕೊಂಡು ಬಂದು ಇಲ್ಲಿನ ಕೂಟುಹೊಳೆ ಸೇತುವೆ ಸಮೀಪ ಕಸದ ಮೂಟೆಗಳನ್ನು ಎಸೆಯುತ್ತಿದ್ದರು.

ADVERTISEMENT

ಈ ವೇಳೆ ಬ್ರಹ್ಮಗಿರಿ ವನ್ಯಜೀವಿ ವಲಯ ಹಾಗೂ ಮಾಕುಟ್ಟ ಪ್ರಾದೇಶಿಕ ವಲಯದ ಅರಣ್ಯ ಅಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿತು.

ಬ್ರಹ್ಮಗಿರಿ ವನ್ಯಜೀವಿ ವಲಯದ ವಲಯ ಅರಣ್ಯ ಅಧಿಕಾರಿ ಡ್ಯಾನ್ಸಿ ದೇಚಮ್ಮ, ಉಪ ವಲಯ ಅರಣ್ಯ ಸಂರಕ್ಷಣಾ ಅಧಿಕಾರಿ ಲೋಕೇಶ್, ಸಿಬ್ಬಂದಿಯಾದ ಸ್ವಾಮಿ, ಸುಬ್ಬಯ್ಯ, ಮಾಕುಟ್ಟ ಪ್ರಾದೇಶಿಕ ವಲಯದ ವಲಯ ಅರಣ್ಯಾಧಿಕಾರಿ ಸುಹಾನಾ, ಉಪ ವಲಯ ಅರಣ್ಯ ಸಂರಕ್ಷಣಾ ಅಧಿಕಾರಿ ಚಂದ್ರಶೇಖರ, ಸಿಬ್ಬಂದಿ ಶಜಿ, ರೋಷನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.