ADVERTISEMENT

ಸೋಮವಾರಪೇಟೆ: ಶ್ರೀರಾಮ ಮಂದಿರದಲ್ಲಿ ವೈಕುಂಠ ಏಕಾದಶಿ ಆಚರಣೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2025, 13:53 IST
Last Updated 10 ಜನವರಿ 2025, 13:53 IST
ಸೋಮವಾರಪೇಟೆ ಶ್ರೀ ರಾಮಮಂದಿರದಲ್ಲಿ ಶುಕ್ರವಾರ ನಡೆದ 8ನೇ ವರ್ಷದ ವೈಕುಂಠ ಏಕಾದಶಿ ಕಾರ್ಯಕ್ರಮದಲ್ಲಿ ಉಯ್ಯಾಲೋತ್ಸವ ನಡೆಯಿತು.
ಸೋಮವಾರಪೇಟೆ ಶ್ರೀ ರಾಮಮಂದಿರದಲ್ಲಿ ಶುಕ್ರವಾರ ನಡೆದ 8ನೇ ವರ್ಷದ ವೈಕುಂಠ ಏಕಾದಶಿ ಕಾರ್ಯಕ್ರಮದಲ್ಲಿ ಉಯ್ಯಾಲೋತ್ಸವ ನಡೆಯಿತು.   

ಸೋಮವಾರಪೇಟೆ: ಇಲ್ಲಿನ ಕುರುಹಿನಶೆಟ್ಟಿ ಸಮಾಜದ ಶ್ರೀರಾಮ ಮಂದಿರದಲ್ಲಿ ಶುಕ್ರವಾರ 8ನೇ ವರ್ಷದ ವೈಕುಂಠ ಏಕಾದಶಿ ಮತ್ತು ಸತ್ಸಂಗ ನಡೆಯಿತು. ‌

 ದೇವಸ್ಥಾನವನ್ನು ಹೂವು, ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆ ಮತ್ತು ಸಂಜೆ ವಿಶೇಷ ಪೂಜೆಗಳು ನಡೆದವು. ದೇವಸ್ಥಾನದ ಅರ್ಚಕ ಮೋಹನ್ ಶಾಸ್ತ್ರಿ ಪೂಜೆಸಿದರು.

ಸಂಜೆ 5 ಗಂಟೆಗೆ ಸೀತಾ ಬಳಗದಿಂದ ವಿಷ್ಣು ಸಹಸ್ರನಾಮ ಪಠಣೆ, 6 ಗಂಟೆಯಿಂದ ಆರ್ಟ್‌ ಆಫ್ ಲಿವಿಂಗ್‌ನ ಸ್ವಾಮಿ ಸೂರ್ಯಪಾದಜೀ ಅವರಿಂದ ಗಾನ, ಜ್ಞಾನ, ಧ್ಯಾನಗಳನ್ನು ಒಳಗೊಂಡ  ಸತ್ಸಂಗ  ನಡೆಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.