ವಿರಾಜಪೇಟೆ: ಕಡಂಗದ ಕೊಕ್ಕಂಡಬಾಣೆ ದರ್ಗಾದ ಉರುಸ್‌ಗೆ ಶುಕ್ರವಾರ ಚಾಲನೆ ನೀಡಲಾಯಿತು.
ಮಧ್ಯಾಹ್ನದ ನಮಾಜ್ ಬಳಿಕ ಮುಹ್ಯದ್ದೀನ್ ಜುಮಾ ಮಸೀದಿಯಿಂದ ಹೊರಟ ಜಾಥವು ಕೊಕ್ಕಂಡಬಾಣೆ ದರ್ಗಾವನ್ನು ತಲುಪಿತು. ಜಮಾಹತ್ ಅಧ್ಯಕ್ಷ ಅಬ್ದುಲ್ಲ ಧ್ವಜಾರೋಹಣ ನೆರವೇರಿಸಿದರು. ಮದ್ರಸ ಮುಖ್ಯಶಿಕ್ಷಕ ಶುಹೈಬ್ ಫೈಜಿ ಮಾತನಾಡಿ, ಉರುಸ್ ಅಂಗವಾಗಿ ಐದು ದಿನಗಳ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಜಮಾಹತ್ ಖತೀಬ ಮೊಹಮ್ಮದ್ ರಫೀಕ್ ಲತೀಫಿ, ಕಾರ್ಯದರ್ಶಿ ಅಬ್ದುಲ್ ರೆಹಮಾನ್, ಸಹ ಕಾರ್ಯದರ್ಶಿ ಸಮೀರ್ ಪಿ.ಎಚ್, ಸಂಸ್ಥೆಯ ಉಪಾಧ್ಯಕ್ಷ ಸಲಾಂ, ಹ್ಯಾರಿಸ್, ಯೂಸಫ್ ಉಸ್ತಾದ್, ಬದ್ರಿಯಾ ಜುಮಾ ಮಸೀದಿ
ಖತೀಬ ಇಸ್ಮಾಯಿಲ್ ಲತೀಫಿ, ಉಸ್ಮಾನ್ ಕೆ.ಇ. ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.