ADVERTISEMENT

ವಿರಾಜಪೇಟೆ: ಸಮಾಜಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಿ

ಲಯನ್ಸ್ ಕ್ಲಬ್‌ ವಲಯ ರಾಜ್ಯಪಾಲೆ ಬಿ.ಎಂ. ಭಾರತಿ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2025, 7:55 IST
Last Updated 6 ಏಪ್ರಿಲ್ 2025, 7:55 IST
ವಿರಾಜಪೇಟೆ ಸಮೀಪದ ಅಮ್ಮತ್ತಿ ಕೊಡವ ಸಮಾಜದ ಸಭಾಂಗಣದಲ್ಲಿ ಅಮ್ಮತ್ತಿ ಲಯನ್ಸ್ ಕ್ಲಬ್ ಮತ್ತು ಸಿದ್ದಾಪುರ ಲಯನ್ಸ್ ಕಬ್‌ನ ಆಶ್ರಯದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಲಯನ್ಸ್ ವಲಯ ರಾಜ್ಯಪಾಲೆ ಬಿ.ಎಂ. ಭಾರತಿ ಮಾತನಾಡಿದರು
ವಿರಾಜಪೇಟೆ ಸಮೀಪದ ಅಮ್ಮತ್ತಿ ಕೊಡವ ಸಮಾಜದ ಸಭಾಂಗಣದಲ್ಲಿ ಅಮ್ಮತ್ತಿ ಲಯನ್ಸ್ ಕ್ಲಬ್ ಮತ್ತು ಸಿದ್ದಾಪುರ ಲಯನ್ಸ್ ಕಬ್‌ನ ಆಶ್ರಯದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಲಯನ್ಸ್ ವಲಯ ರಾಜ್ಯಪಾಲೆ ಬಿ.ಎಂ. ಭಾರತಿ ಮಾತನಾಡಿದರು   

ವಿರಾಜಪೇಟೆ: ಸಂಘ ಸಂಸ್ಥೆಗಳು ತಮ್ಮ ಧ್ಯೇಯ, ಉದ್ದೇಶಗಳು ಹಾಗೂ ಸಾಮಾಜಿಕ ಕಳಕಳಿಯ ತಳಹದಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತವೆ. ಸಂಘ–ಸಂಸ್ಥೆಗಳು ಅನುಷ್ಠಾನಗೊಳಿಸುವ ಯೋಜನೆಗಳು ಸಮಾಜಕ್ಕೆ ಪೂರಕವಾಗಿದ್ದು ಇವುಗಳಿಂದ ಪರಿಣಾಮಕಾರಿ ಫಲಿತಾಂಶ ಲಭಿಸುವಂತಿರಬೇಕು ಎಂದು ಲಯನ್ಸ್ ವಲಯ ರಾಜ್ಯಪಾಲೆ ಬಿ.ಎಂ. ಭಾರತಿ ಅವರು ಅಭಿಪ್ರಾಯಪಟ್ಟರು.

ಸಮೀಪದ ಅಮ್ಮತ್ತಿ ಕೊಡವ ಸಮಾಜದ ಸಭಾಂಗಣದಲ್ಲಿ ಅಮ್ಮತ್ತಿ ಲಯನ್ಸ್ ಕ್ಲಬ್ ಮತ್ತು ಸಿದ್ದಾಪುರ ಲಯನ್ಸ್ ಕ್ಲಬ್‌ನ ಆಶ್ರಯದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಘ ಸಂಸ್ಥೆಗಳನ್ನು ಹುಟ್ಟು ಹಾಕುವುದು ಸುಲಭ. ಆದರೆ ಸರಿಯಾದ ಪಥದಲ್ಲಿ ನಡೆಸಿಕೊಂಡು ಹೋಗುವುದು ಕಷ್ಟದ ಕೆಲಸ. ಕೈಗೊಳ್ಳುವ ಸಮಾಜಮುಖಿ ಕಾರ್ಯಗಳಿಂದ ಸಮಾಜಕ್ಕೆ ಉಪಯುಕ್ತವಾಗಿದೆಯೆ ಎಂದು ತಿಳಿದುಕೊಳ್ಳುವುದು ಮುಖ್ಯ ಎಂದರು.

ಅಮ್ಮತ್ತಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಆರತಿ ಕಾರ್ಯಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್‌ನ ಕಾರ್ಯದರ್ಶಿ ಕೃತಿನಾ ಪೂಣಚ್ಚ ಮತ್ತು ಸಿದ್ದಾಪುರ ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ಕುರಿಯನ್ ಜಾರ್ಜ್ ಅವರು ವಾರ್ಷಿಕ ವರದಿಯನ್ನು ವಾಚಿಸಿದರು.

ADVERTISEMENT

ವೇದಿಕೆಯಲ್ಲಿ ಸಿದ್ದಾಪುರ ಲಯನ್ಸ್ ಕ್ಲಬ್‌ ಅಧ್ಯಕ್ಷ ಸುನೀಲ್ ಕುಕ್ಕನೂರು, ಸಿದ್ದಾಪುರ ಲಯನ್ಸ್ ಕ್ಲಬ್‌ ಖಜಾಂಚಿ ಕುಶಾಲಪ್ಪ, ಅಮ್ಮತ್ತಿ ಲಯನ್ಸ್ ಕ್ಲಬ್‌ ಖಜಾಂಚಿ ದಿನೇಶ್ ಕೋಡಿರ, ಪ್ರಾಂತ ಅಧ್ಯಕ್ಷರಾದ ಕೆ.ಎ.ಮಹದೇವಪ್ಪ, ಕೆ. ಬೊಳ್ಳಪ್ಪ, ಸುಮನ್ ಬಿ., ಪ್ರಾದೇಶಿಕ ರಾಯಭಾರಿಗಳಾದ ಮೋಹನ್ ದಾಸ್, ಪ್ರಾದೇಶಿಕ ಅಧ್ಯಕ್ಷರಾದ ಕನ್ನಿಕಾ ಅಯ್ಯಪ್ಪ, ಸದಸ್ಯ ಎಸ್.ಎಸ್. ಪೂಣಚ್ಚ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್‌ ಮಾಜಿ ಅಧ್ಯಕ್ಷೆ ಜ್ಯೋತಿ ಪೊನ್ನಪ್ಪ, ಸೇರಿದಂತೆ ಅಮ್ಮತ್ತಿ ಹಾಗೂ ಸಿದ್ದಾಪುರ ಲಯನ್ಸ್ ಕ್ಲಬ್‌ಗಳ ಸದಸ್ಯರ ಸೇರಿದಂತೆ ಜಿಲ್ಲೆಯ ವಿವಿಧ ಲಯನ್ಸ್ ಪದಾಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.