ಸಕಲೇಶಪುರ: ಮಠಸಾಗರ ಗ್ರಾಮಕ್ಕೆ ಬುಧವಾರ ಬೆಳಿಗ್ಗೆ ನುಗ್ಗಿದ ಕಾಡಾನೆಯು ಗ್ರಾಮಸ್ಥರಲ್ಲಿ ಭಯ ಉಂಟುಮಾಡಿತು.
ಬೆಳಿಗ್ಗೆ 7.30ರ ಸುಮಾರಿಗೆ ಗ್ರಾಮದ ಮನೆಗಳ ಅಂಗಳಕ್ಕೆ ಬಂದ ಈ ಆನೆಯ ಕಂಡು ಜನರು ಜೋರಾಗಿ ಕೂಗಿಕೊಂಡರು. ಹೊರಗೆ ಇದ್ದವರು ಜಾಗೃತಗೊಂಡು, ಮನೆಯೊಳಗೆ ಓಡಿದರು. ಸುಮಾರು 15 ನಿಮಿಷ ಗ್ರಾಮದಲ್ಲಿ ಗಾಬರಿಯಿಂದ ಓಡಾಡಿದ ಈ ಆನೆಯು ನಂತರ ಪಕ್ಕದ ಕಾಫಿ ತೋಟದತ್ತ ತೆರಳಿತು. ಯಾವುದೇ ಪ್ರಾಣಹಾನಿ ಉಂಟಾಗಿಲ್ಲ.
10 ದಿನಗಳ ಹಿಂದೆ ಇದೇ ಗ್ರಾಮದಿಂದ ಕೂಗಳತೆ ದೂರದಲ್ಲಿ ಕಾಡಾನೆ ಯೊಂದು ಅರ್ಚಕ ಆಶಿಕ್ ಭಟ್ ಎಂಬುವವರನ್ನು ಕೊಂದು ಹಾಕಿತ್ತು. ಅದೇ ಆನೆ ಮತ್ತೆ ಬಂದಿದೆ ಎಂದು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.