ಗೋಣಿಕೊಪ್ಪಲು: ತಿತಿಮತಿ ಸಮೀಪದ ಹೆಬ್ಬಾಲೆ ಪಟ್ಟಣದಲ್ಲಿ ಬುಧವಾರ ಕಾಫಿ ತೋಟದ ಕೆಲಸಕ್ಕೆ ಕಾರ್ಮಿರನ್ನು ಕರೆದೊಯ್ಯುತ್ತಿದ್ದ ಆಮ್ನಿ ಕಾರಿನ ಮೇಲೆ ಕಾಡಾನೆ ದಾಳಿ ನಡೆಸಿದೆ.
ನಾಗರಹೊಳೆ ವನ್ಯಜೀವಿ ವಿಭಾಗಕ್ಕೆ ಸೇರಿದ ಅರಣ್ಯದೊಳಗಿನ ಪ್ರದೇಶದಲ್ಲಿ ಉಮೇಶ್ ಎಂಬವರು ಕಾರ್ಮಿಕರನ್ನು ಕಾರಿನಲ್ಲಿ ಕರೆದುಕೊಂಡು ಬರುತ್ತಿದ್ದರು ಎನ್ನಲಾಗಿದೆ. ಈ ವೇಳೆ ಕಾಡಾನೆಯೊಂದು ಎದುರಾಗಿದೆ. ಇದರಿಂದ ಆನೆಯ ಒಂದು ಬದಿ ಕಾರಿಗೆ ತಗುಳಿ ಕಾರಿನ ಮುಂಭಾಗದ ಗಾಜು ಜಖಂಗೊಂಡಿದೆ. ಕಾರಿನ ಒಳಗಿದ್ದವರು ಜೋರಾಗಿ ಕಿರುಚಿದ್ದರಿಂದ ಆನೆ ಓಡಿ ಹೋಗಿದೆ.
ಈ ವೇಳೆ ತಿತಿಮತಿ ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಘಟನೆಯಿಂದ ಗಾಬರಿಗೊಂಡು ಸ್ವಲ್ಪ ಹೊತ್ತು ಅಸ್ವಸ್ಥಗೊಂಡಿದ್ದಳು. ಆಕೆಗೆ ತಿತಿಮತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.
ಸ್ಥಳಕ್ಕೆ ಮತ್ತಿಗೋಡು ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ದಿಲೀಪ್, ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.