ಮುಳಬಾಗಲು: ಗ್ರಾಮೀಣ ಭಾಗದ ಬಡ ಮತ್ತು ಮಧ್ಯಮ ವರ್ಗದವರ ಆರೋಗ್ಯ ಕಾಯ್ದುಕೊಳ್ಳಲು ಉಚಿತ ಆರೋಗ್ಯ ಶಿಬಿರ ಹೆಚ್ಚು ಅತ್ಯಗತ್ಯವಾಗಿದೆ ಎಂದು ಕೋಲಾರ ಹಾಲು ಒಕ್ಕೂಟ ನಿರ್ದೇಶಕ ಹಾಗೂ ಮುಳಬಾಗಲು ರೋಟರಿ ಸೆಂಟ್ರಲ್ ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್ ಸಲಹೆ ನೀಡಿದರು. ತಾಲ್ಲೂಕಿನ ಮಲ್ಲನಾಯಕನಹಳ್ಳಿ ಗ್ರಾಮದಲ್ಲಿ ಶನಿವಾರ ದೇವರಾಜ ಅರಸು ಮಹಾವಿದ್ಯಾಲಯ, ರೋಟರಿ ಕ್ಲಬ್, ದೊಡ್ಡಭದ್ರೇಗೌಡ ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್, ಐಎಂಎ, ಜಿಲ್ಲಾ ಹಾಲು ಒಕ್ಕೂಟ ಮತ್ತು ಮಲ್ಲನಾಯಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ದೇವರಾಜ ಅರಸು ವೈದ್ಯಕೀಯ ಕಾಲೇಜು ಸಂಪರ್ಕಾಧಿಕಾರಿ ಪ್ರಭುದೇವ್, ರೋಗ ರುಜಿನ ಕುರಿತು ವಿವರಿಸಿದರು. ಜಿ.ಪಂ. ಸದಸ್ಯ ಕೆ.ಆರ್.ಕಿಟ್ಟಪ್ಪ, ತಾ.ಪಂ. ಅಧ್ಯಕ್ಷೆ ತೀವೇಣಮ್ಮ, ಉಪಾಧ್ಯಕ್ಷ ಶ್ರೀನಿವಾಸರೆಡ್ಡಿ, ಸದಸ್ಯರಾದ ತಿಮ್ಮರಾಜು, ಡಾ.ದೊಡ್ಡಭದ್ರೇಗೌಡ, ಡಾ.ಸುನೀತಾ, ನಿವೃತ್ತ ಪ್ರಾಂಶುಪಾಲ ಆರ್.ಎಸ್.ಕೃಷ್ಣಯ್ಯಶೆಟ್ಟಿ, ಕೆ.ವಿ.ಚೌಡಪ್ಪ, ನರಸಿಂಹರೆಡ್ಡಿ, ಕೋಲಾರ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಪುಣ್ಯಕೋಟಿ, ರೋಟರಿ ಕಾರ್ಯದರ್ಶಿ ಟಿ.ಆರ್.ನಾಗರಾಜ್, ಪ್ರಾಂಶುಪಾಲ ಅಶ್ವತ್ಥ, ಅನಂತಪದ್ಮನಾಭರಾವ್, ಶಿವಾರೆಡ್ಡಿ, ಪ್ರಮೀಳಮ್ಮ ಹಾಗೂ ವೈದ್ಯರು ಭಾಗವಹಿಸಿದ್ದರು. ಶ್ರೀನಿವಾಸರೆಡ್ಡಿ ಸ್ವಾಗತಿಸಿದರು. ವೇದವ್ಯಾಸಮೂರ್ತಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.