ADVERTISEMENT

ಬೈವೋಲ್ಟೇನ್ ರೇಷ್ಮೆ ಹೆಚ್ಚು ಲಾಭದಾಯಕ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 9:15 IST
Last Updated 17 ಫೆಬ್ರುವರಿ 2011, 9:15 IST

ಕೋಲಾರ: ‘ರೇಷ್ಮೆ ಬೆಳೆಗಾರರು ಮಿಶ್ರ ಬೈವೋಲ್ಟೇನ್ ತಳಿಯನ್ನು ಬೆಳೆಯುವತ್ತ ಗಮನ ಹರಿಸಬೇಕು’ ಎಂದು ಮೈಸೂರಿನ ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರದ (ಸಿಎಸ್‌ಆರ್‌ಟಿಐ) ನಿರ್ದೇಶಕ ಡಾ.ಎಸ್.ಎಂ.ಎಚ್.ಖಾದ್ರಿ ಸಲಹೆ ನೀಡಿದರು.

ನಗರದ ರೇಷ್ಮೆ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ, ಹಿಪ್ಪುನೇರಳೆ ಬೇಸಾಯದಲ್ಲಿ ಮಣ್ಣಿನ ಆರೋಗ್ಯ ಮತ್ತು ಪೋಷಕಾಂಶಗಳ ನಿರ್ವಹಣೆ ಕುರಿತು ಏರ್ಪಡಿಸಿದ್ದ ಜ್ಞಾನಾರ್ಜನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಚೈನಾ ಮತ್ತು ಜಪಾನ್‌ನಲ್ಲಿ ಬೈವೋಲ್ಟೇನ್ ಬೆಳೆದು ರೈತರು ಹೆಚ್ಚು ಲಾಭ ಗಳಿಸುತ್ತಿದ್ದಾರೆ. ನಮ್ಮ ದೇಶದ ದಕ್ಷಿಣ ಭಾಗದ ತಮಿಳುನಾಡಿನಲ್ಲಿ ಶೇ.30ರಷ್ಟು ಬೈವೋಲ್ಟೇನ್ ರೇಷ್ಮೆ ಉತ್ಪಾದನೆಯಾಗುತ್ತದೆ. ಅದೇ ಕಾರಣದಿಂಧ ಅಲ್ಲಿನ ರೈತರ ಆರ್ಥಿಕ ಸ್ಥಿತಿಯೂ ಉತ್ತಮವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೂ ಈ ತಳಿ ಬೆಳಸುವತ್ತ ಗಮನ ಹರಿಸುವುದು ಅಗತ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರ ಇದೇ ನಿಟ್ಟಿನಲ್ಲಿ ಯೋಜನೆ ರೂಪಿಸಿದೆ ಎಂದರು.

ರೇಷ್ಮೆ ಇಲಾಖೆ ಜಂಟಿ ನಿರ್ದೇಶಕ ಗೋಪಾಲ ನಾಯಕ್, ನಿರ್ದೇಶನಾಲಯದ ಉಪನಿರ್ದೇಶಕ ಡಾ.ಕೆ.ಬಿ.ಶಾಂತಮೂರ್ತಿ, ಉಪನಿರ್ದೇಶಕ ಎಸ್.ಎಸ್.ತುಪ್ಪದ್, ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಚಿನ್ನಾಪುರ ನಾರಾಯಣಸ್ವಾಮಿ, ಸಿಎಸ್‌ಆರ್‌ಟಿಐ ನಿವೃತ್ತ ನಿರ್ದೇಶಕ ಡಾ.ತಮ್ಮಣ್ಣ ನಿ.ಸೋನವಾಲಕರ, ವಿಜ್ಞಾನಿಗಳಾದ ಡಾ.ಕೌಂಡಿನ್ಯ, ಡಾ.ಜೈಶಂಕರ್, ರೇಷ್ಮೆ ಸಹಾಯಕ ನಿರ್ದೇಶಕ ಬಿ.ಎಲ್.ಕೃಷ್ಣಪ್ಪ ಉಪಸ್ಥಿತರಿದ್ದರು.ನಂತರ, ಸಿಎಸ್‌ಆರ್‌ಟಿಐ ಮತ್ತು ಕೊಡತಿಯ ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ತಾಂತ್ರಿಕ ಮಾಹಿತಿ ನೀಡಿ ಪ್ರಾತ್ಯಕ್ಷಿಕೆ ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.