ADVERTISEMENT

ಮಹರ್ಷಿ ವಾಲ್ಮೀಕಿ ಸಮಾಜ ಸುಧಾರಕ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 7:10 IST
Last Updated 12 ಅಕ್ಟೋಬರ್ 2011, 7:10 IST

ಶ್ರೀನಿವಾಸಪುರ: ವಾಲ್ಮೀಕಿ ಮಹರ್ಷಿ ರಾಮಾಯಣ ಮಹಾ ಕಾವ್ಯ ರಚಿಸುವುದರ ಮೂಲಕ ಕಾಲಾತೀತ ವಾಗಿ ಎಲ್ಲ ಸಮುದಾಯಗಳ ಗೌರವಕ್ಕೆ ಪಾತ್ರರಾಗಿದ್ದಾರೆ. ಸಮಾಜ ಸುಧಾರಣೆಯಲ್ಲಿ ಅವರ ಪಾತ್ರ ಹಿರಿದು ಎಂದು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ಇಲ್ಲಿನ ಮಿನಿ ವಿಧಾನಸೌಧದ ಎದುರು ತಾಲ್ಲೂಕು ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.

ವಾಲ್ಮೀಕಿ  ಜನಾಂಗಕ್ಕೆ ಮೂಲಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಹಾಕಿಕೊಂಡಿದೆ  ಎಂದರು.

ಸಚಿವ ಆರ್.ವರ್ತೂರು ಪ್ರಕಾಶ್ ಮಾತನಾಡಿ, ವಾಲ್ಮೀಕಿ ಜನಾಂಗ ಹಿಂದುಳಿದಿದ್ದು, ಅಭಿವೃದ್ಧಿಗೆ ಪೂರಕ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸಲಾಗುವುದು ಎಂದು ಹೇಳಿದರು.

ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿದರು. ಶಿಕ್ಷಕ ವೆಂಕಟರವಣಪ್ಪ ವಾಲ್ಮೀಕಿ ಬದುಕು ಬರಹ ಕುರಿತು ಮಾತನಾಡಿದರು.
 

ಇದಕ್ಕೂ ಮೊದಲು ಪಟ್ಟಣದ ಮುಖ್ಯ ರಸ್ತೆಗಳಲ್ಲಿ ವಾಲ್ಮೀಕಿ ಮಹರ್ಷಿಗಳ ಭಾವ ಚಿತ್ರಗಳ ಮೆರವಣಿಗೆ ಏರ್ಪಡಿಸಲಾಗಿತ್ತು.

ತಹಶೀಲ್ದಾರ್ ಪೂರ್ಣಿಮಾ, ಜಿ.ಪಂ. ಉಪಾಧ್ಯಕ್ಷ ಜಿ.ಸೋಮಶೇಖರ್, ಸದಸ್ಯರಾದ ಜಿ.ಕೆ.ನಾಗರಾಜ್, ಆರ್.ನಾರಾಯಣಸ್ವಾಮಿ, ಎಪಿಎಂಸಿ ಅಧ್ಯಕ್ಷ ಎಂ.ಶ್ರೀನಿವಾಸನ್, ತಾ.ಪಂ. ಅಧ್ಯಕ್ಷ ವೈದ್ಯಂ ವೆಂಕಟರೆಡ್ಡಿ, ಉಪಾಧ್ಯಕ್ಷ ಆಂಜಿನಪ್ಪ, ಕಾರ್ಯನಿರ್ವಹಣಾಧಿಕಾರಿ ಡಾ.ಕೃಷ್ಣಾರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಮಹ್ಮದ್‌ಖಲೀಲ್, ಪುರಸಭಾಧ್ಯಕ್ಷ ಎಸ್. ಶ್ರೀನಿವಾಸಪ್ಪ, ಮುಖಂಡರಾದ ರಾಜಶೇಖರರೆಡ್ಡಿ, ಗಣೇಶ್, ಬಂಡಪಲ್ಲಿ ಕೃಷ್ಣಾರೆಡ್ಡಿ, ಗೌರಮ್ಮ, ಜ್ಯೋತಿ, ಕುಮ್ಮಗುಂಟ ರಾಮನ್ನ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಎಂ.ರಾಮಚಂದ್ರ ನಿರೂಪಿಸಿದರು. ನಾಗರಾಜ್ ಸ್ವಾಗತಿಸಿದರು. ರಾಮಣ್ಣ ವಂದಿಸಿದರು.

ವೈಭವದ ವಾಲ್ಮೀಕಿ ಜಯಂತಿ ಆಚರಣೆ
ಮುಳಬಾಗಲು: ವಾಲ್ಮೀಕಿ ಜನಾಂಗ ಒಗ್ಗಟ್ಟಾಗಿ ಸರ್ಕಾರ ನೀಡುವ ಸವಲತ್ತು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಅಮರೇಶ್ ನುಡಿದರು.

ಪಟ್ಟಣದ ನೇತಾಜಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಫಾಟಿಸಿ ಮಾತನಾಡಿ,  ಎಸ್.ಟಿ. ಜನಾಂಗದ ಆರ್ಥಿಕ ಸ್ವಾವಲಂಬನೆಗೆ ಹಲವಾರು ಯೋಜನೆ ತಂದಿರುವುದಾಗಿ ಹೇಳಿದರು.

ತಹಶೀಲ್ದಾರ್ ಪಿ.ಜಯಮಾಧವ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಸದಸ್ಯೆ ಲಕ್ಮೀದೇವಮ್ಮ, ಇಒ ಡಾ.ವೆಂಕಟಸ್ವಾಮಿ, ಮಾಜಿ ಉಪಾಧ್ಯಕ್ಷ ಎನ್.ವೆಂಕಟೇಶಗೌಡ,  ಸಂಘದ ಅಧ್ಯಕ್ಷ ಎಂ.ಪಿ.ವೆಂಕಟ ರವಣಪ್ಪ,  ವಿ.ವಿ.ವೆಂಕಟೇಶಪ್ಪ, ಕೆ.ಕೇಶವಮೂರ್ತಿ, ಅಮರನಾಥ್, ಮೆಕಾನಿಕ್ ಶ್ರೀನಿವಾಸ್, ಆರ್‌ಎಂಸಿ ಕಾರ್ಯದರ್ಶಿ ಎಂ.ಕೃಷ್ಣನ್ ಇದ್ದರು. ದ್‌ಪಾಷ ನಿರೂಪಿಸಿದರು. ಎಂ.ರಾಮಚಂದ್ರಪ್ಪ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT