ADVERTISEMENT

ಕೋಲಾರ | ‘ಜಿ ರಾಮ್‌ ಜಿ’ ವಿರುದ್ಧ ಆಂದೋಲನ: ಅಭಿಷೇಕ ದತ್ತ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 7:43 IST
Last Updated 25 ಡಿಸೆಂಬರ್ 2025, 7:43 IST
ಕೋಲಾರದಲ್ಲಿ ಬುಧವಾರ ನಡೆದ ಜಿಲ್ಲಾ ಕಿಸಾನ್‌ ಕಾಂಗ್ರೆಸ್‌ ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿ ಅಭಿಷೇಕ್‌ ದತ್ತ ಮಾತನಾಡಿದರು. ಸಚಿನ್ ಮಿಗಾ, ಸೀತಿಹೊಸೂರು ಮುರಳಿಗೌಡ, ಕೆ.ಜಯದೇವ್ ಪಾಲ್ಗೊಂಡಿದ್ದರು
ಕೋಲಾರದಲ್ಲಿ ಬುಧವಾರ ನಡೆದ ಜಿಲ್ಲಾ ಕಿಸಾನ್‌ ಕಾಂಗ್ರೆಸ್‌ ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿ ಅಭಿಷೇಕ್‌ ದತ್ತ ಮಾತನಾಡಿದರು. ಸಚಿನ್ ಮಿಗಾ, ಸೀತಿಹೊಸೂರು ಮುರಳಿಗೌಡ, ಕೆ.ಜಯದೇವ್ ಪಾಲ್ಗೊಂಡಿದ್ದರು    

ಕೋಲಾರ: ಗ್ರಾಮೀಣ ಪ್ರದೇಶದ ಜನರ ಏಳಿಗಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ‌ ಸರ್ಕಾರ ಜಾರಿ ‌ಮಾಡಿದ್ದ ಮನರೇಗಾ‌ ಯೋಜನೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ‌ ನಾಶ ‌ಮಾಡುತ್ತಿದೆ ಎಂದು ಎಐಸಿಸಿ ಕಾರ್ಯದರ್ಶಿ‌ ಅಭಿಷೇಕ ದತ್ತ ವಾಗ್ದಾಳಿ‌ ನಡೆಸಿದರು.

ನಗರದ ಕಾಂಗ್ರೆಸ್ ‌ಭವನದಲ್ಲಿ‌ ಬುಧವಾರ ಜಿಲ್ಲಾ‌ ಕಿಸಾನ್ ಕಾಂಗ್ರೆಸ್ ಘಟಕ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಮನರೇಗಾ‌ ಎಂಬ‌ ಹೆಸರು ಬದಲಾಯಿಸಿ ‘ವಿಬಿ ಜಿ ರಾಮ್ ಜಿ’ ಎಂದು ಕರೆಯುತ್ತಿದ್ದಾರೆ. ಯೋಜನೆಯ ಅನುದಾನ ಕಡಿತ ಮಾಡಿ ಬಡವರು, ರೈತರ ಹೊಟ್ಟೆ ‌ಮೇಲೆ ಹೊಡೆಯುತ್ತಿದ್ದಾರೆ. ಗ್ರಾಮ ವಿರೋಧಿ ಮಸೂದೆ ಇದಾಗಿದ್ದು, ಪ್ರತಿ ಹಳ್ಳಿಗೆ ಹೋಗಿ ಬಿಜೆಪಿಯ ಜನ ವಿರೋಧಿ ನೀತಿಗಳ ಬಗ್ಗೆ ಹೇಳಬೇಕು ಎಂದರು.

ADVERTISEMENT

ಕಿಸಾನ್ ಕಾಂಗ್ರೆಸ್‌ನಿಂದ ದೊಡ್ಡಮಟ್ಟದ ಹೋರಾಟ ಹಮ್ಮಿಕೊಳ್ಳಬೇಕು. ಆಂದೋಲನ ರೂಪಿಸಬೇಕು‌. ಸಭೆ ನಡೆಸಿ ಏನೆಲ್ಲಾ ಸಮಸ್ಯೆ ಇದೆ ಎಂಬುದನ್ನು ಹೇಳಬೇಕು. ವಿಧಾನಸಭೆವಾರು, ತಾಲ್ಲೂಕುವಾರು, ಬ್ಲಾಕ್‌ವಾರು ಸಭೆ ನಡೆಸಿ ಎಂದು ‌ಸೂಚನೆ‌‌ ನೀಡಿದರು.

ಕಿಸಾನ್‌ ಕಾಂಗ್ರೆಸ್‌ನಿಂದ ‌ಏನೇನು ಕಾರ್ಯಕ್ರಮ ಮಾಡಿದ್ದೀರಿ‌ ಎಂದು ‌ಪ್ರಶ್ನಿಸಿದರು. ಮುಂದೆ ಸಕ್ರಿಯವಾಗಿ ಕಾರ್ಯಕ್ರಮ ರೂಪಿಸಬೇಕು ಎಂದು‌ ನಿರ್ದೇಶನ‌ ನೀಡಿದರು.

ಸಭೆಯಲ್ಲಿ ರಾಜ್ಯ ಕಿಸಾನ್ ಕಾಂಗ್ರೆಸ್ ಘಟಕದ ರಾಜ್ಯ ಅಧ್ಯಕ್ಷ ಸಚಿನ್ ಮಿಗಾ, ಜಿಲ್ಲಾ ಕಿಸಾನ್ ಕಾಂಗ್ರೆಸ್ ಟಕದ ಅಧ್ಯಕ್ಷ ಸೀತಿಹೊಸೂರು ಮುರಳಿಗೌಡ, ಜಿಲ್ಲಾ ಕಾಂಗ್ರೆಸ್‌ ಎಸ್‌ಸಿ ಘಟಕದ ಅಧ್ಯಕ್ಷ ಕೆ.ಜಯದೇವ, ವೆಂಕಟೇಶ್‌, ಆಂಜಿನಪ್ಪ, ಲಾಲ್‌ ಬಹದ್ದೂರು ಶಾಸ್ತ್ರಿ, ಸುಭಾಶ್‌ ಗೌಡ, ಖಾದ್ರಿಪುರ ಬಾಬು, ರಾಜ್‌ಕುಮಾರ್‌, ಕುಮಾರ್‌, ರಾಜ್ಯ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ಇದ್ದರು‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.