ADVERTISEMENT

ಕೆಜಿಎಫ್‌: ನಗರಸಭೆ ಮೇಲೆ ಎಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 2:45 IST
Last Updated 25 ಮಾರ್ಚ್ 2021, 2:45 IST
ಕೆಜಿಎಫ್‌ ರಾಬರ್ಟಸನ್‌ಪೇಟೆ ನಗರಸಭೆ ಮೇಲೆ ಬುಧವಾರ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ನಗರಸಭೆ ಆಯುಕ್ತೆ ಸರ್ವರ್ ಮರ್ಚೆಂಟ್‌ ಅವರ ಚಾಲಕನನ್ನು ವಿಚಾರಣೆಗೆ ಒಳಪಡಿಸಿದರು
ಕೆಜಿಎಫ್‌ ರಾಬರ್ಟಸನ್‌ಪೇಟೆ ನಗರಸಭೆ ಮೇಲೆ ಬುಧವಾರ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ನಗರಸಭೆ ಆಯುಕ್ತೆ ಸರ್ವರ್ ಮರ್ಚೆಂಟ್‌ ಅವರ ಚಾಲಕನನ್ನು ವಿಚಾರಣೆಗೆ ಒಳಪಡಿಸಿದರು   

ಕೆಜಿಎಫ್‌: ರಾಬರ್ಟಸನ್‌ಪೇಟೆ ನಗರಸಭೆ ಮೇಲೆ ಬುಧವಾರ ಸಂಜೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಅಧಿಕಾರಿ ಮತ್ತು ಸಿಬ್ಬಂದಿ ಬಳಿ ಇದ್ದ ಅಕ್ರಮ ಹಣ ಪತ್ತೆ ಹಚ್ಚಿದ್ದಾರೆ.

ಆಯುಕ್ತೆ ಸರ್ವರ್ ಮರ್ಚೆಂಟ್‌ ಬಳಿ ₹38 ಸಾವಿರ ಇತರ ಸಿಬ್ಬಂದಿ ಬಳಿ ಇದ್ದ ₹73 ಸಾವಿರ ಅಕ್ರಮವಾಗಿ ಕಂಡು ಬಂದಿದೆ ಎಂದು ಎಸಿಬಿ ಡಿವೈಎಸ್ಪಿ ಪುರುಷೋತ್ತಮ ತಿಳಿಸಿದರು.

ರಾಬರ್ಟಸನ್‌ಪೇಟೆ ನಗರಸಭೆ ಮೇಲೆ ಸಾಕಷ್ಟು ದೂರುಗಳು ಕೇಳಿ ಬಂದಿದ್ದವು. ಎಸಿಬಿಗೆ ಲಿಖಿತ ದೂರುಗಳು ಬಂದಿದ್ದವು. ನಗರಸಭೆಯಲ್ಲಿ ಮಧ್ಯವರ್ತಿಗಳ ಕಾಟ ಹೆಚ್ಚಾಗಿತ್ತು. ಸದಾ ಕಾಲ ಆಯುಕ್ತರ ಕಚೇರಿಯಲ್ಲಿ ಮಧ್ಯವರ್ತಿಗಳು ತುಂಬಿರುತ್ತಿದ್ದರು. ಇದರಿಂದಾಗಿ ಸಾರ್ವಜನಿಕರು ತಮ್ಮ ಕೆಲಸ ಮಾಡಿಸಿಕೊಳ್ಳಲು ಅನಾನುಕೂಲ ಉಂಟಾಗಿತ್ತು. ಇ–ಖಾತೆ ಮಾಡಲು ಲಂಚ ಕೇಳುವುದು, ಆಸ್ತಿ ತೆರಿಗೆ ತೋರಿಸುವಲ್ಲಿ ವ್ಯತ್ಯಾಸ ಮಾಡಿ ಹೆಚ್ಚುವರಿ ಹಣ ವಸೂಲಿ ಮಾಡುವುದು, ವ್ಯಾಪಾರಸ್ಥರಿಗೆ ನೀಡುವ ಲೈಸೆನ್ಸ್‌ನಲ್ಲಿ ಕೂಡ ಲಂಚ ಪಡೆಯುವ ಬಗ್ಗೆ ದೂರುಗಳು ಇದ್ದವು.

ADVERTISEMENT

ಆಯುಕ್ತರ ಕಾರಿನ ಚಾಲಕನನ್ನು ಕೂಡ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.