ADVERTISEMENT

ಎಸ್ಸೆಸ್ಸೆಲ್ಸಿ: ವಿಜ್ಞಾನದಲ್ಲಿ ಮುನ್ನಡೆ– ಗಣಿತದಲ್ಲಿ ಹಿನ್ನಡೆ

ಜಿಲ್ಲೆಯಲ್ಲಿ ಗಣಿತ ಫಲಿತಾಂಶ ತುಸು ಇಳಿಕೆ

​ಪ್ರಜಾವಾಣಿ ವಾರ್ತೆ
Published 1 ಮೇ 2019, 14:49 IST
Last Updated 1 ಮೇ 2019, 14:49 IST

ಕೋಲಾರ: ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯು ಗುಣಾತ್ಮಕತೆಯಲ್ಲಿ ರಾಜ್ಯದಲ್ಲೇ 7ನೇ ಸ್ಥಾನ ಪಡೆದಿದ್ದು, ಈ ವರ್ಷ ಶೇ 3.37ರಷ್ಟು ಫಲಿತಾಂಶ ಸಹ ಹೆಚ್ಚಳವಾಗಿದೆ.

ಆದರೆ, ಈ ಬಾರಿ ಗಣಿತ ವಿಷಯವು ಮಕ್ಕಳ ಪಾಲಿಗೆ ಕಠಿಣವಾಗಿದ್ದ ಕಾರಣ ಜಿಲ್ಲೆಯಲ್ಲಿ ಫಲಿತಾಂಶದಲ್ಲಿ ಇಳಿಕೆಯಾಗಿದೆ. ಜಿಲ್ಲೆಯ ವಿಷಯವಾರು ಫಲಿತಾಂಶ ಅವಲೋಕಿಸಿದಾಗ ವಿಜ್ಞಾನದಲ್ಲಿ ಶೇ 93.4ರಷ್ಟು ಮಂದಿ ತೇರ್ಗಡೆಯಾಗಿದ್ದಾರೆ. ಗಣಿತದಲ್ಲಿ ಶೇ 86.5ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿರುವುದು ಗಣಿತಕ್ಕೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವನ್ನು ತಿಳಿಸುತ್ತದೆ.

ವಿಷಯವಾರು ಫಲಿತಾಂಶದಲ್ಲಿ ಕನ್ನಡದಲ್ಲಿ ಶೇ 94.3ರಷ್ಟು ಮಂದಿ ತೇರ್ಗಡೆಯಾಗಿದ್ದಾರೆ. ದ್ವಿತೀಯ ಭಾಷೆಯಲ್ಲಿ ಶೇ 94.9, ತೃತೀಯ ಭಾಷೆಯಲ್ಲಿ ಅತಿ ಹೆಚ್ಚು ಶೇ 98.1ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ. ಗಣಿತದಲ್ಲಿ ಶೇ 86.5ರಷ್ಟು ವಿದ್ಯಾರ್ಥಿಗಳು, ವಿಜ್ಞಾನದಲ್ಲಿ ಶೇ 93.4ರಷ್ಟು ಹಾಗೂ ಸಮಾಜ ವಿಜ್ಞಾನ ವಿಷಯದಲ್ಲಿ ಶೇ 91.8 ಮಂದಿ ತೇರ್ಗಡೆಯಾಗಿದ್ದಾರೆ.

ADVERTISEMENT

ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿರುವ ಹಾಸನ ಜಿಲ್ಲೆಯ ಒಟ್ಟಾರೆ ಫಲಿತಾಂಶ ಶೇ 89.34ರಷ್ಟಿದೆ. ಜಿಲ್ಲೆಯಲ್ಲಿ ಎಲ್ಲಾ ವಿಷಯಗಳಲ್ಲೂ ಫಲಿತಾಂಶ ಶೇ 91.3ಕ್ಕಿಂತಲೂ ಹೆಚ್ಚಿದೆ. ಆದರೆ, ಗಣಿತದಲ್ಲಿ ಫಲಿತಾಂಶ ತುಸು ಇಳಿಕೆಯಾಗಿರುವುದರಿಂದ ಜಿಲ್ಲೆಯ ಒಟ್ಟಾರೆ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ.

ತಾಲ್ಲೂಕುವಾರು ಫಲಿತಾಂಶ: ಬಂಗಾರಪೇಟೆ ತಾಲ್ಲೂಕು ಕನ್ನಡದಲ್ಲಿ ಶೇ 94.1, ಇಂಗ್ಲೀಷ್‌ನಲ್ಲಿ ಶೇ 92.8, ತೃತೀಯ ಭಾಷೆಯಲ್ಲಿ ಶೇ 98, ಗಣಿತದಲ್ಲಿ ಶೇ 83.8, ವಿಜ್ಞಾನದಲ್ಲಿ ಶೇ 92.6 ಹಾಗೂ ಸಮಾಜ ವಿಜ್ಞಾನದಲ್ಲಿ ಶೇ 91.1ರಷ್ಟು ಫಲಿತಾಂಶ ಪಡೆದಿದೆ.

ಕೆಜಿಎಫ್ ತಾಲ್ಲೂಕು ಕನ್ನಡದಲ್ಲಿ ಶೇ 92.5, ದ್ವಿತೀಯ ಭಾಷೆಯಲ್ಲಿ ಶೇ 92.8, ತೃತೀಯ ಭಾಷೆಯಲ್ಲಿ ಶೇ 98, ಗಣಿತದಲ್ಲಿ ಶೇ 86.2, ವಿಜ್ಞಾನದಲ್ಲಿ ಶೇ 95.4 ಹಾಗೂ ಸಮಾಜ ವಿಜ್ಞಾನದಲ್ಲಿ ಶೇ 95ರಷ್ಟು ಫಲಿತಾಂಶ ಗಳಿಸಿದೆ. ಕೋಲಾರ ತಾಲ್ಲೂಕಿಗೆ ಕನ್ನಡದಲ್ಲಿ ಶೇ 94.4, ದ್ವಿತೀಯ ಭಾಷೆಯಲ್ಲಿ ಶೇ 94.5, ತೃತೀಯ ಭಾಷೆಯಲ್ಲಿ ಶೇ 97.5, ಗಣಿತದಲ್ಲಿ ಶೇ 84.1, ವಿಜ್ಞಾನದಲ್ಲಿ ಶೇ 92.1 ಹಾಗೂ ಸಮಾಜ ವಿಜ್ಞಾನದಲ್ಲಿ ಶೇ 91.2ರಷ್ಟು ಫಲಿತಾಂಶ ಬಂದಿದೆ.

ಮಾಲೂರು ತಾಲ್ಲೂಕಿಗೆ ಕನ್ನಡದಲ್ಲಿ ಶೇ 95.1, ದ್ವಿತೀಯ ಭಾಷೆಯಲ್ಲಿ ಶೇ 95.7, ತೃತೀಯ ಭಾಷೆಯಲ್ಲಿ ಶೇ 98.1, ಗಣಿತದಲ್ಲಿ ಶೇ 88.2, ವಿಜ್ಞಾನದಲ್ಲಿ ಶೇ 93.5 ಹಾಗೂ ಸಮಾಜ ವಿಜ್ಞಾನದಲ್ಲಿ ಶೇ 89.9ರಷ್ಟು ಫಲಿತಾಂಶ ಲಭಿಸಿದೆ. ಮುಳಬಾಗಿಲು ತಾಲ್ಲೂಕು ಕನ್ನಡದಲ್ಲಿ ಶೇ 94.8, ದ್ವಿತೀಯ ಭಾಷೆಯಲ್ಲಿ ಶೇ 93.9, ತೃತೀಯ ಭಾಷೆಯಲ್ಲಿ ಶೇ 98.2, ಗಣಿತದಲ್ಲಿ ಶೇ 85.4, ವಿಜ್ಞಾನದಲ್ಲಿ ಶೇ 91.3 ಹಾಗೂ ಸಮಾಜ ವಿಜ್ಞಾನದಲ್ಲಿ ಶೇ 88.7ರಷ್ಟು ಫಲಿತಾಂಶ ಪಡೆದಿದೆ.

ಶ್ರೀನಿವಾಸಪುರ ತಾಲ್ಲೂಕಿಗೆ ಕನ್ನಡದಲ್ಲಿ ಶೇ 96.7, ದ್ವಿತೀಯ ಭಾಷೆಯಲ್ಲಿ ಶೇ 94.9, ತೃತೀಯ ಭಾಷೆಯಲ್ಲಿ ಶೇ 98.1, ಗಣಿತದಲ್ಲಿ ಶೇ 93.9, ವಿಜ್ಞಾನದಲ್ಲಿ ಶೇ 97.2 ಹಾಗೂ ಸಮಾಜ ವಿಜ್ಞಾನದಲ್ಲಿ ಶೇ 95.9ರಷ್ಟು ಫಲಿತಾಂಶ ಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.