ADVERTISEMENT

ದುಗ್ಗಸಂದ್ರ: ಕೈಗಾರಿಕೆ ಸ್ಥಾಪಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 13:15 IST
Last Updated 17 ಜೂನ್ 2025, 13:15 IST
ಮುಳಬಾಗಿಲು ತಾಲ್ಲೂಕಿನ ದುಗ್ಗಸಂದ್ರ ಹೋಬಳಿಯ ಖಾಲಿ ಜಮೀನುಗಳಲ್ಲಿ ವಾಣಿಜ್ಯ ವಲಯ ಸ್ಥಾಪನೆಗೆ ಕೋರಿ ಬಿಜೆಪಿಯಿಂದ ಶಾಸಕ ಸಮೃದ್ಧಿ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಲಾಯಿತು 
ಮುಳಬಾಗಿಲು ತಾಲ್ಲೂಕಿನ ದುಗ್ಗಸಂದ್ರ ಹೋಬಳಿಯ ಖಾಲಿ ಜಮೀನುಗಳಲ್ಲಿ ವಾಣಿಜ್ಯ ವಲಯ ಸ್ಥಾಪನೆಗೆ ಕೋರಿ ಬಿಜೆಪಿಯಿಂದ ಶಾಸಕ ಸಮೃದ್ಧಿ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಲಾಯಿತು    

ಮುಳಬಾಗಿಲು: ತಾಲ್ಲೂಕಿನ ದುಗ್ಗಸಂದ್ರ ಹೋಬಳಿಯಲ್ಲಿ ಇರುವ ಸುಮಾರು 12 ಸಾವಿರ ಎಕರೆ ಭೂಮಿಯಲ್ಲಿ ವಾಣಿಜ್ಯ ಹಾಗೂ ಕೈಗಾರಿಕಾ ವಲಯ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಬಿಜೆಪಿಯ ನಂಗಲಿ ಸತೀಶ್ ಹಾಗೂ ಪಿ.ಎಂ. ರಘುನಾಥ್ ನೇತೃತ್ವದ ತಂಡ ಶಾಸಕ, ಸಂಸದ ಹಾಗೂ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿತು. 

ಹೋಬಳಿಯಲ್ಲಿ ಸುಮಾರು 12 ಸಾವಿರ ಎಕರೆಗಳಷ್ಟು ಸರ್ಕಾರದ ಭೂಮಿ ಇದೆ. ಈ ಜಾಗವು ವಾಣಿಜ್ಯ ಹಾಗೂ ಕೈಗಾರಿಕಾ ವಲಯ ಸ್ಥಾಪನೆಗೆ ಯೋಗ್ಯವಾಗಿದೆ ಎಂದು ಈ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ. ರವಿ ಅವರು ಆಗಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಮಾಹಿತಿ ಸಲ್ಲಿಸಿದ್ದರು. ಆದರೆ, ಅಂದಿನ ಸಂಸದ ಕೆ.ಎಚ್. ಮುನಿಯಪ್ಪ ಅವರು ಈ ಭೂಮಿಯಲ್ಲಿ ನೀರಿಲ್ಲ ಎಂಬುದಾಗಿ ತಪ್ಪು ಮಾಹಿತಿ ನೀಡಿದ್ದರು. ಈ ಬಗ್ಗೆ ಮತ್ತೆ ಪರಿಶೀಲನೆ ನಡೆಸಬೇಕು ಎಂದು ನಂಗಲಿ ಸತೀಶ್ ಕುಮಾರ್ ಒತ್ತಾಯಿಸಿದರು. 

ಪಿ.ಎಂ.ರಘುನಾಥ್, ಸತೀಶ್ ಕುಮಾರ್, ಜಯಪ್ಪ, ಶ್ರೀನಿವಾಸ ಬಾಬು, ಉದಯ್ ಕುಮಾರ್, ನಾರಾಯಣ ಗೌಡ, ಶಂಕರ ರೆಡ್ಡಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.