ADVERTISEMENT

ಕೋಲಾರ | ₹5 ಲಕ್ಷಕ್ಕೆ ಮಗು ಮಾರಾಟ: ಐವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 8:26 IST
Last Updated 7 ಫೆಬ್ರುವರಿ 2026, 8:26 IST
<div class="paragraphs"><p>ಬಂಧನ </p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಶುಕ್ರವಾರ ಗಂಡು ಮಗು ಮಾರಾಟ ಮಾಡಿದ್ದು, ಪೋಷಕರು, ಖರೀದಿಸಿದವರು ಹಾಗೂ ಮಧ್ಯವರ್ತಿ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ADVERTISEMENT

₹5 ಲಕ್ಷಕ್ಕೆ ಆರು ದಿನಗಳ ಹಸುಳೆಯನ್ನು ಮಾರಾಟ ಮಾಡಿದ ಪ್ರಕರಣ ಇದಾಗಿದೆ.

ನೀತು, ರಾಘವೇಂದ್ರ, ನಾರಾಯಣಸ್ವಾಮಿ, ಖರೀದಿದಾರ ದಂಪತಿಯನ್ನು ಬಂಧಿಸಿ‌ ತನಿಖೆ ನಡೆಸುತ್ತಿದ್ದಾರೆ.

ಮದುವೆಯಾಗದೆ ಪರಸ್ಪರ ಜೊತೆಗಿದ್ದ (ಲಿವಿಂಗ್ ರಿಲೇಷನ್) ಶ್ರೀನಿವಾಸಪುರ ಪಟ್ಟಣದ ನೀತು ಹಾಗೂ ರಾಘವೇಂದ್ರ ಅವರು ಮಧ್ಯವರ್ತಿ ನಾರಾಯಣಸ್ವಾಮಿ ಎಂಬುವರ ಮೂಲಕ ತಮ್ಮ ಮಗು ಮಾರಾಟ ಮಾಡಿದ್ದಾರೆ. ಚಿಂತಾಮಣಿ ತಾಲ್ಲೂಕಿನ ದಂಪತಿ ಈ ಮಗು ಖರೀದಿಸಿದ್ದರು.

6 ದಿನಗಳ ಹಿಂದೆ ನರ್ಸಿಂಗ್ ಹೋಂನಲ್ಲಿ ಈ ಮಗು ಜನಿಸಿತ್ತು. ಮಗುವನ್ನು ಮರಳಿ ಪಡೆದು ಪೋಷಕರಿಗೆ ಒಪ್ಪಿಸಿದ್ದಾರೆ. ಮಗು ಮಾರಾಟ ಮಾಡಿರುವ ನೀತು ಅವರಿಗೆ ಈಗಾಗಲೇ ಎರಡು ಮಕ್ಕಳು ಇವೆ.

'ಪ್ರಕರಣ ದಾಖಲಿಸಿಕೊಂಡು ಐವರನ್ನು ಬಂಧಿಸಲಾಗಿದೆ. ಮನೆಯಲ್ಲಿ ಆರ್ಥಿಕ ಸಮಸ್ಯೆ ಇದ್ದ ಕಾರಣ ಮಾರಾಟ ಮಾಡಿರುವುದು ಗೊತ್ತಾಗಿದೆ. ತನಿಖೆ ನಡೆಸಲಾಗುತ್ತಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ತಿಳಿಸಿದರು.

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.