
ಬಂಗಾರಪೇಟೆ: ಸಾರ್ವಜನಿಕರ ಉಪಯೋಗಕ್ಕೆ ನಿರ್ಮಾಣವಾಗಿರುವ ತಂಗುದಾಣಗಳು ಸೂಕ್ತ ನಿರ್ವಹಣೆ ಇಲ್ಲದೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ ಮಾರ್ಪಟ್ಟಿವೆ.
ತಾಲ್ಲೂಕಿನಾದ್ಯಂತ ಪ್ರಮುಖ ರಸ್ತೆಗಳಲ್ಲಿ ಪ್ರಯಾಣಿಕರ ಉಪಯೋಗಕ್ಕೆ ಕೋಟ್ಯಂತರ ವೆಚ್ಚದಲ್ಲಿ ನಿರ್ಮಾಣವಾಗಿರುವ ತಂಗುದಾಣಗಳು ಬಳಕೆಗೆ ಬಾರದ ಸ್ಥಿತಿ ತಲುಪಿ, ಕುಡುಕರ ತಾಣವಾಗಿ ಮಾರ್ಪಟ್ಟಿವೆ.
ಬಂಗಾರಪೇಟೆ ಮತ್ತು ಕೆಜಿಎಫ್ ಮುಖ್ಯ ರಸ್ತೆಯಲ್ಲಿರುವ ದೇಶಿಹಳ್ಳಿ ಬಡಾವಣೆಯಲ್ಲಿನ 2020–21ನೇ ಸಾಲಿನಲ್ಲಿ ₹5 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ತಂಗುದಾಣ ಸರಿಯಾದ ನಿರ್ವಹಣೆ ಇಲ್ಲದೆ ಕುಡುಕರ ಅವಾಸ ತಾಣವಾಗಿದೆ.
ಇಷ್ಟೇ ಅಲ್ಲದೆ ಬಾವರಹಳ್ಳಿ, ಪರವನಹಳ್ಳಿ, ಹಂಚಾಳ, ಹುದುಕುಳ ಗ್ರಾಮಗಳಲ್ಲಿ ಮಳೆ ಹಾಗೂ ಬಿಸಿಲಿನಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿರ್ಮಾಣವಾಗಿದ್ದ ತಂಗುದಾಣಗಳು ಸೂಕ್ತ ನಿರ್ವಹಣೆ ಇಲ್ಲದೆ ಗಿಡಗಂಟಿಗಳು ಬೆಳೆದಿವೆ. ಇದರಿಂದ ಪ್ರಯಾಣಿಕರು ತಂಗುದಾಣ ಬಳಸಲು ಹಿಂದೇಟು ಹಾಕುತ್ತಾರೆ. ರಾತ್ರಿ ವೇಳೆ ಕುಡುಕರ ಅಡ್ಡೆಯಾಗಿ ಸಾರ್ವಜನಿಕರು ಸಂಚರಿಸಲು ಭಯಪಡುವಂತಾಗಿದೆ.
ತಂಗುದಾಣದಲ್ಲಿ ಎಲ್ಲೆಂದರಲ್ಲಿ ಮಧ್ಯದ ಪಾಕೆಟ್, ಪ್ಲಾಸ್ಟಿಕ್ ಲೋಟಗಳೊಂದಿಗೆ ಮಳೆ ನೀರು ನಿಂತು ಗಬ್ಬುನಾರುತ್ತಿದೆ. ಹಾಗಾಗಿ ಪ್ರಯಾಣಿಕರು ಮಳೆ ಬಂದರೂ ಆಶ್ರಯ ಪಡೆಯಲು ಹಿಂದೇಟು ಹಾಕುತ್ತಾರೆ. ಹಾಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ತಂಗುದಾಣಗಳನ್ನು ಸ್ವಚ್ಛಗೊಳಿಸಿ ಬಳಕೆಗೆ ಬರುವಂತೆ ಮಾಡಬೇಕೆಂಬುದು ಸಾರ್ವಜನಿಕರ ಆಶಯ.ತಂಗುದಾಣಗಳ ನಿರ್ವಹಣೆ ಮಾಡುವುದು ಯಾರ ಜವಾಬ್ದಾರಿ ಎಂದು ಸರ್ಕಾರ ಸೂಚಿಸಿಲ್ಲ. ಆದರೆ ಸ್ಥಳೀಯ ಆಡಳಿತ ಸಂಸ್ಥೆಗಳು ಸ್ವಚ್ಛತೆ ಕಾಪಾಡಬೇಕು. ರವಿಕುಮಾರ್ ಎಇಇ ಲೋಕೋಪಯೋಗಿ ಇಲಾಖೆ
ರಾತ್ರಿ ವೇಳೆ ತಂಗುದಾಣಗಳು ‘ಮಿನಿ ಬಾರ್’ ಗಳಾಗಿ ಮಾರ್ಪಡುತ್ತಿವೆ. ಮದ್ಯದ ಬಾಟಲಿ ಸಿಗರೇಟ್ ತುಂಡು ಮತ್ತು ತಿಂಡಿ ಪೊಟ್ಟಣಗಳು ಅಲ್ಲಿ ಬಿದ್ದಿರುವುದು ಸಾಮಾನ್ಯವಾಗಿದೆ.ಆನಂದ್ ಬಾಬು, ದೇಶಿಹಳ್ಳಿ ನಿವಾಸಿ
ತಂಗುದಾಣಗಳಲ್ಲಿ ದೀಪ ಮತ್ತು ಸಿಸಿಟಿವಿ ಕ್ಯಾಮೆರಾದ ಕಣ್ಗಾವಲು ಇಲ್ಲದಿರುವುದು ಅಕ್ರಮ ಚಟುವಟಿಕೆ ನಡೆಸುವವರಿಗೆ ಅನುಕೂಲಕರವಾಗಿದೆ.ಹುಣಸನಹಳ್ಳಿ ಎನ್.ವೆಂಕಟೇಶ್, ರಾಜ್ಯಾಧ್ಯಕ್ಷ, ದಲಿತ ರೈತ ಸೇನೆ
ತಂಗುದಾಣಗಳ ನಿರ್ವಹಣೆ ಮಾಡುವುದು ಯಾರ ಜವಾಬ್ದಾರಿ ಎಂದು ಸರ್ಕಾರ ಸೂಚಿಸಿಲ್ಲ. ಆದರೆ ಸ್ಥಳೀಯ ಆಡಳಿತ ಸಂಸ್ಥೆಗಳು ಸ್ವಚ್ಛತೆ ಕಾಪಾಡಬೇಕು.ರವಿಕುಮಾರ್, ಎಇಇ, ಲೋಕೋಪಯೋಗಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.