
ಪ್ರಜಾವಾಣಿ ವಾರ್ತೆ
ಕೋಲಾರ: ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ ಪ್ರತಿ ಟನ್‌ಗೆ ₹ 3,500 ದರ ಘೋಷಿಸಬೇಕೆಂದು ಆಗ್ರಹಿಸಿ ರೈತ ಸಂಘದಿಂದ ಶುಕ್ರವಾರ ನಗರದ ಪಲ್ಲವಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
‘ಅನ್ನದಾತನಿಗೆ ಅನ್ಯಾಯವಾದಾಗ ಜಿಲ್ಲೆಯ ರೈತ ಸಂಘ ಸದಾ ಬೆಂಬಲವಾಗಿ ನಿಂತಿದೆ. 24ಗಂಟೆಯಲ್ಲಿ ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿದೆ ಹೋದರೆ ಲಕ್ಷಾಂತರ ರೈತರರೊಂದಿಗೆ ರಾಷ್ಟ್ರೀಯ ರಾಜ್ಯ ಹಾಗೂ ಗ್ರಾಮೀಣ ರಸ್ತೆ ಬಂದ್ ಮಾಡಲಾಗುವುದು’ ಎಂದು ಸಂಘದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಎ.ನಳಿನಿಗೌಡ ಎಚ್ಚರಿಕೆ ನೀಡಿದರು.
ರೈತ ಸಂಘ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ‘ಬೆವರಿಗೆ ತಕ್ಕ ಬೆಲೆ ನೀಡಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿ 7 ದಿನಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ಸರ್ಕಾರಗಳು ರೈತವಿರೋಧಿ ಧೋರಣೆ ಅನುಸರಿಸುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟದಲ್ಲಿ ಜಿಲ್ಲಾಧಕ್ಷ ಈಕಂಬಳ್ಳಿ ಮಂಜುನಾಥ, ರಾಜ್ಯ ಮುಖಂಡ ಬಂಗವಾದಿ ನಾಗರಾಜುಗೌಡ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಕುವಣ್ಣ, ಗೋವಿಂದಪ್ಪ ಚಂದ್ರಪ್ಪ ವಕ್ಕಲೇರಿ ಹನುಮಯ್ಯ ಅಪ್ಪೋಜಿರಾವ್, ಯಲ್ಲಣ್ಣ, ರಾಮಸಾಗರದ ವೇಣು, ಬಾಬು, ಕೇಶವ ಸುಪ್ರಿಂ ಚಲ, ಗಂಗಾಧರ್ ಮುನಿರಾಜು ಶೈಲಜ ರತ್ನಮ್ಮ ಬಾಗ್ಯಮ್ಮ ಗೌರಮ್ಮ ಚೌಡಮ್ಮ ಗೀತಮ್ಮ ವೆಂಕಟಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.