ADVERTISEMENT

ಶ್ರೀನಿವಾಸಪುರ: ಬೆಸ್ಕಾಂ ಕ್ರಿಕೆಟ್ ಟೂರ್ನಿ; 20 ತಂಡ ಭಾಗಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 6:54 IST
Last Updated 14 ಡಿಸೆಂಬರ್ 2025, 6:54 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಶ್ರೀನಿವಾಸಪುರ: ಪಟ್ಟಣದ ಅಮಾನಿಕೆರೆ ಅಂಗಳದ ನೇತಾಜಿ ಕ್ರೀಡಾಂಗಣದಲ್ಲಿ ಬೆಸ್ಕಾಂ ಅಧಿಕಾರಿ, ನೌಕರರು, ಶ್ರೀನಿವಾಸಪುರ ಪ್ರಾಥಮಿಕ ಸಮಿತಿ ಹಾಗೂ ಎಲ್ಲಾ ಸಂಘಗಳ ಸಹಯೋಗದಲ್ಲಿ ಹುತಾತ್ಮ ನೌಕರರ ಜ್ಞಾಪಕಾರ್ಥಕವಾಗಿ ಶನಿವಾರ ಟೆನಿಸ್‌ಬಾಲ್ ಕ್ರಿಕೆಟ್ ಟೂರ್ನಿ ನಡೆಯಿತು. 20 ತಂಡಗಳು ಭಾಗವಹಿಸಿದ್ದವು.

ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಎಷ್ಟು ದೊಡ್ಡ ವ್ಯಕ್ತಿಯು ಚಿಕ್ಕಮಗುವಾಗಿ ಬಿಡುತ್ತಾನೆ. ಯಾವುದೇ ಒತ್ತಡ ಇದ್ದರೂ ಆಟವಾಡಲು ಸಾಧ್ಯವಾಗುತ್ತದೆ ಎಂದು ಕೋಲಾರ ವಿಭಾಗದ ಬೆಸ್ಕಾಂ ಕಾರ್ಯನಿರ್ವಾಹಕ ಎಂಜನಿಯರ್ ಶುಭಾ ತಿಳಿಸಿದರು.

ADVERTISEMENT

ಆರು ತಿಂಗಳಿಗೊಮ್ಮೆ ನಮ್ಮ ವೃತ್ತದಲ್ಲಿ ಟೂರ್ನಿ ನಡೆಯುತ್ತದೆ. ಈ ವಿಭಾಗದಲ್ಲಿ ವಿಜೇತರಾದವರು ಮುಂದಿನ ಟೂರ್ನಿಗೆ ಹೋಗಲು ಅವಕಾಶವಿರುತ್ತದೆ ಎಂದರು.

ಕೋಲಾರ ಉಪಲೆಕ್ಕ ನಿಯಂತ್ರಣಾಧಿಕಾರಿ ಅಶೋಕರೆಡ್ಡಿ, ಚಿಂತಾಮಣಿ ಸಹಾಯಕ ಕಾರ್ಯಪಾಲಕ ಎಂಜನಿಯರ್ ಡಿ.ಜಿ.ಶಿವಶಂಕರ್, ಬೆಂಗಳೂರಿನ ನೌಕರರ ಸಂಘದ ಅಧಿಕ ಕಾರ್ಯದರ್ಶಿ ಸುಕುಮಾರ್, ಚಿಂತಾಮಣಿ ಎಇಇ ಸೂರ್ಯಪ್ರಕಾಶ್, ಕೇಂದ್ರ ಸಮಿತಿ ಸದಸ್ಯರಾದ ಚಂದ್ರು ಆರ್, ಬೆವಿಕಾಂ ತಾಂತ್ರಿಕ ಮೇಲ್ವಿಚಾರಕಿ ಮಮತಾ, ವೆಂಕಟೇಶಪ್ಪ, ರಾಮಚಂದ್ರಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.