
ಬೇತಮಂಗಲ: ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಟಿಸಿಸಿ ಗೆಳೆಯರ ಬಳಗದ ವತಿಯಿಂದ ಬಂಗಾರು ತಿರುಪತಿ (ಗುಟ್ಟಹಳ್ಳಿ)ಯ ಕ್ರಿಕೆಟ್ ಮೈದಾನದಲ್ಲಿ ನಾಲ್ಕು ದಿನಗಳಿಂದ ನಡೆದ ಬೇತಮಂಗಲ ಪ್ರೀಮಿಯರ್ ಲೀಗ್ – 4 ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಗಣ್ಯರು ಭಾನುವಾರ ಬಹುಮಾನ ವಿತರಿಸಿದರು.
ಪ್ರಥಮ ಬಹುಮಾನ ಪಡೆದ ಕೃಷ್ಣ ಇಲೆವೆನ್ಸ್ ತಂಡ ₹ 55,555 ನಗದು ಹಾಗೂ ಟ್ರೋಫಿ, ಎರಡನೇ ಬಹುಮಾನ ಪಡೆದ ಅರುಣ್ ಇಲೆವೆನ್ಸ್ ತಂಡ ₹33,333 ನಗದು ಹಾಗೂ ಟ್ರೋಫಿ, ತೃತೀಯ ಬಹುಮಾನ ತನ್ನಿದಾಗಿಸಿಕೊಂಡ ಪವರ್ ಹಿಟ್ಟರ್ ತಂಡದವರು ₹11,111 ನಗದು ಹಾಗೂ ಟ್ರೋಫಿಯನ್ನು ಪಡೆದುಕೊಂಡರು.
ಈ ವೇಳೆ ಕೋಲಾರ ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಮಹೇಶ್ ಮಾತನಾಡಿ, ಯಾವುದೇ ಕ್ರೀಡಾಕೂಟದಲ್ಲಿ ಸೋಲು– ಗೆಲುವು ಸಾಮಾನ್ಯ. ಅದನ್ನು ಸಮಚಿತ್ತದಿಂದ ಸ್ವೀಕರಿಸಬೇಕು. ಕ್ರೀಡಾಕೂಟದ ತಂಡದಲ್ಲಿ ಪಾಲ್ಗೊಂಡಾಗ ತಂಡದ ಎಲ್ಲರೂ ಒಂದೇ ಸಮ ಎಂಬ ಭಾವನೆ ಬರುತ್ತದೆ. ಕ್ರೀಡಾಕೂಟವು ಮನುಷ್ಯನನ್ನು ಸಮಾಜಕ್ಕೆ ಪರಿಚಯಿಸುವ ಉತ್ತಮ ವೇದಿಕೆ ಎಂದು ತಿಳಿಸಿದರು.
ಬಿಜೆಪಿ ಒಬಿಸಿ ಮೋರ್ಚಾ ಮಾಜಿ ಅಧ್ಯಕ್ಷ ಉದಯ್, ಮಂಜುನಾಥ್, ಪುರುಷೋತ್ತಮ್, ಚಂದ್ರಶೇಖರ್, ಶ್ರೀನಿವಾಸ್, ಅರುಣ್ ಕುಮಾರ್ ಹಿರೇಮಠ, ವಿಜಯ್, ಭರತ್, ಸುನೀಲ್, ವಿನೋದ್, ಅಜಯ್, ಸೋಮಶೇಖರ್, ಸಚಿನ್, ಅಂಬರೀಶ್, ವಿವೇಕ್, ಕಿಶೋರ್, ಬಸವರಾಜ, ಪ್ರಭಾಕರ್, ಚೇತನ್ ಸೇರಿದಂತೆ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.