ADVERTISEMENT

ಕೋಲಾರ | ಕಾಂಗ್ರೆಸ್ ವಿರುದ್ಧ BJP ಪ್ರತಿಭಟನೆ; ದಿಕ್ಕಾಪಾಲಾಗಿ ಓಡಿದ ಎತ್ತುಗಳು

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 7:58 IST
Last Updated 9 ಡಿಸೆಂಬರ್ 2025, 7:58 IST
   

ಕೋಲಾರ: ರೈತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಾಂಗ್ರೆಸ್ ವಿರುದ್ಧ ಮಂಗಳವಾರ ಬಿಜೆಪಿ ಪ್ರತಿಭಟನೆ ನಡೆಸುವಾಗ ತಮಟೆ ಸದ್ದಿಗೆ ಎತ್ತುಗಳು ಗಾಬರಿಗೊಂಡು ದಿಕ್ಕಾಪಾಲಾಗಿ ಓಡಿದ ಘಟನೆ ನಡೆದಿದೆ.

ನಗರದ ಮೆಕ್ಕೆ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಎತ್ತಿನ ಗಾಡಿ‌ಯೊಂದಿಗೆ ಮುಖಂಡರು, ಕಾರ್ಯಕರ್ತರು ಅಲ್ಲಿಗೆ ಬಂದಿದ್ದಾರೆ. ಈ ವೇಳೆ ತಮಟೆ ಸದ್ದಿಗೆ ಬೆದರಿದ ಎತ್ತುಗಳು ಗಾಡಿಯನ್ನು ಎಳೆದಾಡಿದ್ದಾವೆ. ಗಾಬರಿಗೊಂಡು ಹಗ್ಗ ಕಿತ್ತುಕೊಂಡು ಓಡಿ ಹೋಗಲು ಯತ್ನಿಸಿದ್ದಾವೆ. ಇದರಿಂದ ಸುತ್ತ ಇದ್ದ ಕಾರ್ಯಕರ್ತರು ಹೆದರಿ ಓಡಿ ಹೋಗಿದ್ದಾರೆ. ಎತ್ತುಗಳನ್ನು ಹಿಡಿಯಲು ಹೋದವರು ಬಿದ್ದು ಒದ್ದಾಡಿದ್ದಾರೆ.

ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಪ್ರತಿಭಟನೆ ‌ಮುಂದುವರಿಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.