ADVERTISEMENT

ಮುಳಬಾಗಿಲು | ನೇಣು ಬಿಗಿದುಕೊಂಡು ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2024, 14:15 IST
Last Updated 6 ಆಗಸ್ಟ್ 2024, 14:15 IST
ಗಿರಿಧರ್
ಗಿರಿಧರ್   

ಮುಳಬಾಗಿಲು: ನಗರದ ಮುತ್ಯಾಲಪೇಟೆಯ ಪೂಲ್ ಚಂದ್ ಲೇಔಟ್‌ನಲ್ಲಿ 14 ವರ್ಷದ ಬಾಲಕನೊಬ್ಬ ಸೋಮವಾರ ಕಬ್ಬಿಣದ ಸಲಾಕೆಗೆ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಗಿರಿಧರ್ (14) ಆತ್ಮಹತ್ಯೆಗೆ ಶರಣಾದ ಬಾಲಕ. 

ಈತನ ತಂಗಿ ಮತ್ತು ತಾಯಿಯೂ ಈ ಹಿಂದೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ADVERTISEMENT

ತಾಲ್ಲೂಕಿನ ಚಿಕ್ಕನಹಳ್ಳಿಯ ನಿವಾಸಿ ಮುರಳಿ ತನ್ನ ಕುಟುಂಬದೊಂದಿಗೆ ನಗರದಲ್ಲಿ ವಾಸ ಮಾಡುತ್ತಿದ್ದ. ಮೃತ ಬಾಲಕ ನಗರದ ಹೊರವಲಯದ ಶಾಲೆಯೊಂದರಲ್ಲಿ ಎಂಟನೆಯ ತರಗತಿ ಓದುತ್ತಿದ್ದು, ಸೋಮವಾರ ಸಂಜೆ ಎಂದಿನಿಂತೆ ಶಾಲೆಯಿಂದ ಮನೆಗೆ ಬಂದಿದ್ದಾನೆ. ಮನೆಯ ಬಳಿ ಆಟ ಆಡುತ್ತಿದ್ದ ಆತ, ಮನೆಯೊಳಕ್ಕೆ ಹೋಗಿ, ಈ ಹಿಂದೆ ತಾಯಿ ಮತ್ತು ತಂಗಿ ನೇಣು ಬಿಗಿದುಕೊಂಡಿದ್ದ ಚಾವಣಿಯ ಸಲಾಕೆಗೆ ನೇಣು ಬಿಗಿದುಕೊಂಡಿದ್ದಾನೆ. ಆತ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುದು ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.