ಶ್ರೀನಿವಾಸಪುರ: ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಕರ್ನಾಟಕ ದಲಿತ ಬುದ್ಧ ಸೇನೆಯಿಂದ ಬುದ್ಧಪೂರ್ಣಿಮೆ ಅಂಗವಾಗಿ ಬುದ್ಧೋತ್ಸವ ಮತ್ತು ಭೀಮೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶ್ರೀನಿವಾಸಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎಂ.ಬಿ.ಗೊರವನಕೊಳ್ಳ, ಎಲ್ಲಾ ಜೀವಿಗಳ ಬಗ್ಗೆ ಕರುಣೆ ಮತ್ತು ದಯೆಯ ಭೋದನೆಗಳನ್ನು ಪ್ರತಿಬಿಂಬಿಸುವ ಸಮಯ ಇದಾಗಿದೆ ಎಂದರು.
ಕೆಲವು ಬೌದ್ಧರು ಬುದ್ಧ ಪೂರ್ಣಿಮೆ ದಿನದಂದು ಶುದ್ಧೀಕರಣ ಮತ್ತು ಸ್ವಯಂ ಶಿಸ್ತಿನ ಒಂದು ರೂಪವಾಗಿ ಉಪವಾಸ ಆಚರಿಸಲು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.
ಬುದ್ಧರ ಜೀವನ ಶೈಲಿ ಹಾಗೂ ಸಿದ್ಧಾಂತಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ‘ಬಿ.ಆರ್.ಅಂಬೇಡ್ಕರ್ ಹಿಂದೂ ಧರ್ಮದಿಂದ ಭೌದ್ಧ ಧರ್ಮಕ್ಕೆ ಮಾತಾಂತರಗೊಂಡು ಬುದ್ಧನ ಅನುಯಾಯಿಗಳಾದರು. ನಾವೆಲ್ಲರೂ ಬುದ್ಧನ ಆದರ್ಶ, ತತ್ವಗಳನ್ನು ಜೀವನಶೈಲಿಗೆ ಅನ್ವಯಿಸಿಕೊಳ್ಳಬೇಕು’ ಎಂದರು.
ಕರ್ನಾಟಕ ದಲಿತ ಬುದ್ಧ ಸೇನೆ ಸಂಸ್ಥಾಪಕ, ರಾಜ್ಯ ಅಧ್ಯಕ್ಷ ವರ್ತನಹಳ್ಳಿ ವೆಂಕಟೇಶ್ ಮಾತನಾಡಿ, ತಾಲ್ಲೂಕು ಮಟ್ಟದ ಪದಾಧಿಕಾರಿಗಳನ್ನು ನೇಮಿಸಿ, ಪದಾಧಿಕಾರಿಗಳು ಸಂಘಟನೆ ಹಾಗೂ ಸಮಾಜಮುಖಿ ಕೆಲಸಗಳನ್ನು ಮಾಡಬೇಕೆಂದು ಸೂಚಿಸಿದರು.
ದಲಿತ ಮುಖಂಡ ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ, ರೈತ ಮುಖಂಡ ಪ್ರಭಾಕರಗೌಡ, ಗಾಂಡ್ಲಹಳ್ಳಿ ಚಲಪತಿ ಮಾತನಾಡಿದರು.
ದಲಿತ ಮುಖಂಡ ಚಲ್ದಿಗಾನಹಳ್ಳಿ ಈರಪ್ಪ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಆನಂದ್, ತಾಲ್ಲೂಕು ಅಧ್ಯಕ್ಷ ಬಂಡಪಲ್ಲಿ ಶ್ರೀನಿವಾಸ್, ತಾಲ್ಲೂಕು ಪ್ರಧಾನ ಸಂಚಾಲಕ ಚೊಕ್ಕನಹಳ್ಳಿ ನಾರಾಯಣಸ್ವಾಮಿ, ಗೌರವಾಧ್ಯಕ್ಷ ಕಿರುವಾರ ಶ್ರೀರಾಮಯ್ಯ, ಉಪಾಧ್ಯಕ್ಷ ಗುಲ್ಲಕುಂಟೆ ವೆಂಕಟೇಶ್, ಸಂಘಟನಾ ಸಂಚಾಲಕ ನಾಗದೇನಹಳ್ಳಿ ಜಯರಾಮ್, ಖಜಾಂಚಿ ಕೊಡಿಚೆರವು ವೆಂಕಟೇಶ್, ಸಂಘನಾ ಕಾರ್ಯದರ್ಶಿಗಳಾದ ಬಂಡಪಲ್ಲಿ ಆಂಜಪ್ಪ, ಶಿಗೇಹಳ್ಳಿ ವೆಂಕಟರಮಣ, ಆಲವಾಟ ಮಂಜುನಾಥ್, ಬಂಡಪಲ್ಲಿ ನರೇಂದ್ರ , ವರ್ತನಹಳ್ಳಿ ಚಿನ್ನಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.