ADVERTISEMENT

ಕಂಪ್ಯೂಟರ್‌ ಜ್ಞಾನ ಅತ್ಯಗತ್ಯ: ಪ್ರಾಧ್ಯಾಪಕ ಪ್ರೊ.ಶ್ರೀನಿವಾಸಮೂರ್ತಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 14:30 IST
Last Updated 23 ಜನವರಿ 2020, 14:30 IST
ಕೋಲಾರದ ಎಕ್ಸೆಲೆಂಟ್ ಕಂಪ್ಯೂಟರ್ ಎಜುಕೇಷನ್ ಸೆಂಟರ್ ಮತ್ತು ಸಮರ್ಥನಂ ಅಂಗವಿಕಲ ಸಂಸ್ಥೆಯಲ್ಲಿ ಕಂಪ್ಯೂಟರ್ ತರಬೇತಿ ಪಡೆದುಕೊಂಡ ಶಿಬಿರಾರ್ಥಿಗಳಿಗೆ ಬುಧವಾರ ಪ್ರಾಧ್ಯಾಪಕ ಪ್ರೊ.ಶ್ರೀನಿವಾಸಮೂರ್ತಿ ವಿತರಿಸಿದರು.
ಕೋಲಾರದ ಎಕ್ಸೆಲೆಂಟ್ ಕಂಪ್ಯೂಟರ್ ಎಜುಕೇಷನ್ ಸೆಂಟರ್ ಮತ್ತು ಸಮರ್ಥನಂ ಅಂಗವಿಕಲ ಸಂಸ್ಥೆಯಲ್ಲಿ ಕಂಪ್ಯೂಟರ್ ತರಬೇತಿ ಪಡೆದುಕೊಂಡ ಶಿಬಿರಾರ್ಥಿಗಳಿಗೆ ಬುಧವಾರ ಪ್ರಾಧ್ಯಾಪಕ ಪ್ರೊ.ಶ್ರೀನಿವಾಸಮೂರ್ತಿ ವಿತರಿಸಿದರು.   

ಕೋಲಾರ: ‘ಕಂಪ್ಯೂಟರ್ ತರಬೇತಿ ಪಡೆದುಕೊಂಡು ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡರೆ ಉತ್ತಮ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ’ ಎಂದು ಪ್ರಧ್ಯಾಪಕ ಪ್ರೊ.ಶ್ರೀನಿವಾಸಮೂರ್ತಿ ತಿಳಿಸಿದರು.

ನಗರದ ಎಕ್ಸೆಲೆಂಟ್ ಕಂಪ್ಯೂಟರ್ ಎಜುಕೇಷನ್ ಸೆಂಟರ್ ಮತ್ತು ಸಮರ್ಥನಂ ಅಂಗವಿಕಲ ಸಂಸ್ಥೆಯಿಂದ ಬುಧವಾರ ಹಮ್ಮಿಕೊಂಡಿದ್ದ ಕಂಪ್ಯೂಟರ್ ತರಬೇತಿ ಪಡೆದುಕೊಂಡ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

‘ಕಂಪ್ಯೂಟರ್ ತರಬೇತಿಯಿಂದ ವಿದ್ಯಾರ್ಥಿಗಳ ಜ್ಞಾನ ವೃದ್ಧಿಯಾಗುತ್ತದೆ. ಈಗ ಪ್ರತಿ ಕ್ಷೇತ್ರದಲ್ಲೂ ಆನ್‌ಲೈನ್‌ ವ್ಯವಸ್ಥೆ ಜಾರಿಯಾಗಿದ್ದು, ಕೆಲಸಕ್ಕೆ ಸೇರಿಸಿಕೊಳ್ಳುವ ಮುನ್ನ ಕಂಪ್ಯೂಟರ್ ಜ್ಞಾನ ಇದೆಯೇ ಎಂದು ಕೇಳುತ್ತಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಕಂಪ್ಯೂಟರ್‌ ಜ್ಞಾನ ಅತ್ಯಗತ್ಯ’ ಎಂದರು.

ADVERTISEMENT

‘ಅಂಗವಿಕಲ ವಿದ್ಯಾರ್ಥಿಗಳು, ಮಹಿಳೆಯರು ಕಂಪ್ಯೂಟರ್‌ನ ಸಮಾನ್ಯ ಜ್ಞಾನ ಪಡೆದುಕೊಳ್ಳಬೇಕು. ಈಗ ಪ್ರತಿಯೊಂದು ಕ್ಷೇತ್ರದಲ್ಲೂ ಕಂಪ್ಯೂಟರ್ ಅಗತ್ಯವಾಗಿದೆ. ಮಹಿಳೆಯರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದವರೂ ಸಹ ಮುಂದುವರೆಯಬಹುದು’ ಎಂದು ಹೇಳಿದರು.

ಬೆಂಗಳೂರಿನ ಸಮರ್ಥನಂ ಅಂಗವಿಕಲ ಸಂಸ್ಥೆಯ ಯೋಜನಾ ನಿರ್ದೇಶಕಿ ಶಂಕರಮ್ಮ ಮಾತನಾಡಿ, ‘ಸಂಸ್ಥೆಯಿಂದ ಅಂಗವಿಕಲ ಮಕ್ಕಳು, ಮಹಿಳೆಯರು ಸ್ವಾವಲಂಭಿ ಜೀವನ ರೂಪಿಸಿಕೊಳ್ಳಲು ಉಚಿತ ತರಬೇತಿ ನೀಡಲಾಗುತ್ತಿದ್ದು, ಇದರ ಪ್ರಯೋಜನೆ ಪಡೆದುಕೊಳ್ಳಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಎಕ್ಸೆಲೆಂಟ್ ಕೋಚಿಂಗ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಆರ್.ಲಕ್ಷ್ಮಿನಾರಾಯಣ ಮಾತನಾಡಿ, ‘ತರಬೇತಿ ಜತೆಗೆ ಉದ್ಯೋಗ ಕಲ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

‘ಸಂಸ್ಥೆಯಿಂದ 6 ವರ್ಷಗಳಿಂದ ಉಚಿತ ಕಂಪ್ಯೂಟರ್ ತರಬೇತಿ ನೀಡಲಾಗುತ್ತಿದೆ. ಇದೇ ರೀತಿ ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಗ್ರಾಮೀಣ ಭಾಗದ ಅಂಗವಿಕಲರಿಗೂ ವಿಸ್ತಿರಸಲಾಗುವುದು’ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ ಕಾರ್ತಿಕ್, ಉಪನ್ಯಾಸಕ ಕುಮಾರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.