ADVERTISEMENT

ಶ್ರೀನಿವಾಸಪುರ: 4 ಗ್ರಾ.ಪಂ ಕಾಂಗ್ರೆಸ್‌ ತೆಕ್ಕೆಗೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 1:10 IST
Last Updated 11 ಫೆಬ್ರುವರಿ 2021, 1:10 IST
ಶ್ರೀನಿವಾಸಪುರ ತಾಲ್ಲೂಕಿನ ರೋಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಡಿ.ಬಿ. ಶಿವಣ್ಣ ಮತ್ತು ಉಪಾಧ್ಯಕ್ಷರಾಗಿ ಅಮರಾವತಿ ಆಯ್ಕೆಯಾಗಿದ್ದಾರೆ
ಶ್ರೀನಿವಾಸಪುರ ತಾಲ್ಲೂಕಿನ ರೋಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಡಿ.ಬಿ. ಶಿವಣ್ಣ ಮತ್ತು ಉಪಾಧ್ಯಕ್ಷರಾಗಿ ಅಮರಾವತಿ ಆಯ್ಕೆಯಾಗಿದ್ದಾರೆ   

ಶ್ರೀನಿವಾಸಪುರ: ತಾಲ್ಲೂಕಿನ 6 ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 4 ಹಾಗೂ ಜೆಡಿಎಸ್ 2 ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರ ಪಡೆದುಕೊಂಡಿದೆ.

ಗೌನಿಪಲ್ಲಿ ಗ್ರಾಮ ಪಂಚಾಯಿತಿಗೆ ಅರುಣಮ್ಮ (ಅಧ್ಯಕ್ಷೆ), ನಾಗರತ್ನಮ್ಮ (ಉಪಾಧ್ಯಕ್ಷೆ), ಮುತ್ತಕಪಲ್ಲಿ ಗ್ರಾಮ ಪಂಚಾಯಿತಿಗೆ ರೆಡ್ಡಿಪ್ರಸನ್ನ (ಅಧ್ಯಕ್ಷ), ವಿ. ನಾಗರಾಜರೆಡ್ಡಿ (ಉಪಾಧ್ಯಕ್ಷ), ನಂಬಿಹಳ್ಳಿ ಗ್ರಾಮ ಪಂಚಾಯಿತಿಗೆ ನರಸಿಂಹಪ್ಪ (ಅಧ್ಯಕ್ಷ), ಸರಸ್ವತಮ್ಮ (ಉಪಾಧ್ಯಕ್ಷೆ), ನೆಲವಂಕಿ ಗ್ರಾಮ ಪಂಚಾಯಿತಿಗೆ ಎಸ್.ಎನ್. ಗೌತಮಿ (ಅಧ್ಯಕ್ಷೆ), ಮಮತಾ (ಉಪಾಧ್ಯಕ್ಷೆ), ರೋಣೂರು ಗ್ರಾಮ ಪಂಚಾಯಿತಿಗೆ ಡಿ.ಬಿ. ಶಿವಣ್ಣ (ಅಧ್ಯಕ್ಷ), ಅಮರಾವತಿ (ಉಪಾಧ್ಯಕ್ಷೆ), ಲಕ್ಷ್ಮೀಸಾಗರ ಗ್ರಾಮ ಪಂಚಾಯಿತಿಗೆ ಗೀತಮ್ಮ (ಅಧ್ಯಕ್ಷೆ) ಮತ್ತು ಕೆ. ಮಂಜುನಾಥ್ (ಉಪಾಧ್ಯಕ್ಷ) ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT