ADVERTISEMENT

ನ್ಯಾಯಾಂಗ ಇಲಾಖೆಯಿಂದ ಕೋವಿಡ್‌ ಸಹಾಯವಾಣಿ

​ಪ್ರಜಾವಾಣಿ ವಾರ್ತೆ
Published 5 ಮೇ 2021, 5:39 IST
Last Updated 5 ಮೇ 2021, 5:39 IST
ಕೆಜಿಎಫ್‌ ನ್ಯಾಯಾಲಯದಲ್ಲಿ ಮಂಗಳವಾರ ಕೋವಿಡ್ ಲಸಿಕೆ ಅಭಿಯಾನಕ್ಕೆ ನ್ಯಾಯಾಧೀಶರು ಚಾಲನೆ ನೀಡಿದರು
ಕೆಜಿಎಫ್‌ ನ್ಯಾಯಾಲಯದಲ್ಲಿ ಮಂಗಳವಾರ ಕೋವಿಡ್ ಲಸಿಕೆ ಅಭಿಯಾನಕ್ಕೆ ನ್ಯಾಯಾಧೀಶರು ಚಾಲನೆ ನೀಡಿದರು   

ಕೆಜಿಎಫ್‌: ಕೋವಿಡ್‌ ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ಬೇಕಾದ ಅನುಕೂಲಗಳನ್ನು ಕಲ್ಪಿಸಿಕೊಡಲು ನ್ಯಾಯಾಂಗ ಇಲಾಖೆಯಿಂದ ಸಹಾಯವಾಣಿ ಪ್ರಾರಂಭಿಸಲಾಗಿದೆ. ರೋಗಿಗಳು ಮತ್ತು ಅವರು ಕುಟುಂಬದವರು ಸಹಾಯವಾಣಿಯ ಉಪಯೋಗ ಪಡೆಯಬೇಕು ಎಂದು ನ್ಯಾಯಾಧೀಶ ಎಸ್‌.ಪಿ.ಕಿರಣ್‌ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಕೋವಿಡ್‌ ರೋಗಿಗಳಿಗೆ ಹಾಸಿಗೆ, ಆಮ್ಲಜನಕ ಕೊರತೆ, ಅವಶ್ಯಕ ಔಷಧಿಗಳ ಬೇಡಿಕೆ ಬಗ್ಗೆ ಇತರ ಇಲಾಖೆಗಳ ಜೊತೆ ಸಮನ್ವಯ ಸಾಧಿಸಿ ಅನುಕೂಲ ಮಾಡಿಕೊಡಲಾಗುತ್ತದೆ. ಕೋಲಾರ ಜಿಲ್ಲೆಯವರು ಸದಸ್ಯ ಕಾರ್ಯದರ್ಶಿ ಅವರ ನಂಬರ್‌ 87620 02393 ಹಾಗೂ ನ್ಯಾಯಾಂಗ ಇಲಾಖೆ ನೇಮಕ ಮಾಡಿರುವ ವಕೀಲ ಧನ್‌ರಾಜ್‌ ಅವರ 74117 54404 ಸಂಖ್ಯೆಗೆ ಕರೆ ಮಾಡಬಹುದು ಎಂದು ಹೇಳಿದರು.

ನ್ಯಾಯಾಧೀಶೆ ನಸ್ರತ್
ಎಂ. ಖಾನ್‌ ಮತ್ತು ವಕೀಲರ ಸಂಘದ ಕಾರ್ಯದರ್ಶಿ ಜ್ಯೋತಿಬಸು ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.