ADVERTISEMENT

ಮಾಲೂರು: ಚಿಕ್ಕತಿರುಪತಿ ವಿಜೃಂಭಣೆಯ ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 7:22 IST
Last Updated 17 ಅಕ್ಟೋಬರ್ 2025, 7:22 IST
ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿ ಗ್ರಾಮದಲ್ಲಿ ದೀಪೋತ್ಸವ ಕಾರ್ಯಕ್ರಮದಲ್ಲಿ ಮಹಿಳೆಯುರು ತಲೆ ಮೇಲೆ ತಂಬಿಟ್ಟು ಹೊತ್ತು ದೀಪೋತ್ಸವ ಆಚರಿಸಿದರು
ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿ ಗ್ರಾಮದಲ್ಲಿ ದೀಪೋತ್ಸವ ಕಾರ್ಯಕ್ರಮದಲ್ಲಿ ಮಹಿಳೆಯುರು ತಲೆ ಮೇಲೆ ತಂಬಿಟ್ಟು ಹೊತ್ತು ದೀಪೋತ್ಸವ ಆಚರಿಸಿದರು   

ಮಾಲೂರು: ತಾಲ್ಲೂಕಿನ ಚಿಕ್ಕತಿರುಪತಿ ಗ್ರಾಮದಲ್ಲಿ ದೀಪೋತ್ಸವ ಕಾರ್ಯಕ್ರಮವು ಗುರುವಾರ ಬಹಳ ವಿಜೃಂಭಣೆಯಿಂದ ನಡೆಯಿತು.

ಗ್ರಾಮದಿಂದ ಸುಮಾರು 20ಕ್ಕೂ ಹೆಚ್ಚು ಕುಟುಂಬಗಳು ತಮ್ಮ ಮನೆ ದೇವರಾದ ಗುರುಮೂರ್ತಿ ಯಲ್ಲಮ್ಮ ದೇವಿಗೆ ದೀಪೋತ್ಸವ ಮಾಡಿದರು. 

ಜಯಮಂಗಲ ಗ್ರಾಮದಲ್ಲಿ ನೆಲೆಸಿರುವ ಗುರುಮೂರ್ತಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಪ್ರತಿವರ್ಷ ಅಕ್ಟೋಬರ್ ತಿಂಗಳಿನಲ್ಲಿ ಈ ದೀಪೋತ್ಸವ ಕಾರ್ಯಕ್ರಮವನ್ನು ಪ್ರತಿವರ್ಷವೂ ಆಚರಿಸಲಾಗುತ್ತದೆ. ಆದರೆ, ಕಳೆದ ಕೆಲವು ವರ್ಷಗಳ ಕಾಲ ದೀಪೋತ್ಸವ ಮಾಡಿರಲಿಲ್ಲ. ಆರು ವರ್ಷಗಳ ಬಳಿಕ ಇದೀಗ ಮತ್ತೆ ದೀಪೋತ್ಸವ ಆರಂಭಿಸಲಾಗಿದೆ. 

ADVERTISEMENT

ತಮಟೆವಾದ್ಯ ಮುಖಾಂತರ ತಂಬಿಟ್ಟಿನ ದೀಪಗಳನ್ನು ವಂಶಸ್ಥರ ಯುವತಿಯರು, ಮಹಿಳೆಯರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. 

ಈ ಸಂದರ್ಭದಲ್ಲಿ ಉಪನ್ಯಾಸಕ ಡಾ. ರಾಮಕೃಷ್ಣಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ರಾಜಶೇಖರ್, ಮಾಜಿ ಸದಸ್ಯ ಎಂ ಶ್ರೀನಿವಾಸ್, ಉಪನ್ಯಾಸಕ ಮುರುಳಿ, ಶಿಕ್ಷಕರಾದ ನಾರಾಯಣಪ್ಪ, ಬಾಲಕೃಷ್ಣ, ಸಮುದಾಯದ ರಘು, ಅಮರೇಶ್ ಬಾಬು, ಶ್ರೀಧರ್, ರಾಹುಲ್, ಆಕಾಶ್, ಚೇತನ್, ಖುಷಿರಿಷಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.