
ಬಂಧನ
ಶ್ರೀನಿವಾಸಪುರ: ಅಕ್ರಮವಾಗಿ ಗಾಂಜಾ ಸಾಗಾಟದಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳನ್ನು ಶ್ರೀನಿವಾಸಪುರ ಪೊಲೀಸರು ಬಂಧಿಸಿದ್ದಾರೆ.
ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆಯ ಅಕ್ಕಿನಪಲ್ಲಿ ನಾಗರಾಜ್ (29), ಮದನಪಲ್ಲಿ ನಗರದ ಜಿ.ಭಾಗ್ಯಮ್ಮ (28), ಅನ್ನಮಯ್ಯ ಜಿಲ್ಲೆಯ ಪಿಡುಗು ನಾಗೇಂದ್ರ (32) ಹಾಗೂ ಚರ್ಲಾ ರಮಣಪ್ಪ (44) ಬಂಧಿತರು. ಅವರಿಂದ ಐದು ಪಾಕೆಟ್ ಗಾಂಜಾ ವಶಕ್ಕೆ ಪಡೆಯಲಾಗಿದೆ.
ತಾಲ್ಲೂಕಿನ ಜಿ.ವಿ.ಕಾಲೊನಿಯ ಗೇಟ್‌ನ ದಕ್ಷಿಣಕ್ಕಿರುವ ಶಿವಪುರ ಕ್ರಾಸ್‌ನ ಕಡೆಯ ಹೋಗುವ ರಸ್ತೆಯಲ್ಲಿ ಗಾಂಜಾ ಸಾಗಿಸುತ್ತಿದ್ದಾಗ ದಾಳಿ ನಡೆಸಿ ಪತ್ತೆ ಹಚ್ಚಿದ್ದಾರೆ. ದ್ವಿಚಕ್ರ ವಾಹನದಲ್ಲಿ ಚೀಲದಲ್ಲಿ ಗಾಂಜಾ ಇಟ್ಟುಕೊಂಡಿದ್ದರು.
ಮುಳಬಾಗಿಲು ವಿಭಾಗದ ಡಿವೈಎಸ್ಪಿ ಮನಿಷಾ ನೇತೃತ್ವದ ಕಾರ್ಯಾಚರಣೆಯಲ್ಲಿ ಶ್ರೀನಿವಾಸಪುರ ಪೊಲೀಸ್ ಠಾಣೆಯ ಪಿಎಸ್‌ಐ ಜಯರಾಂ, ಸಿಬ್ಬಂದಿ ನಾಗರಾಜ್, ಆನಂದಕುಮಾರ್, ಸಂತೋಷ್ ಕುಮಾರ್, ಗೌನಿಪಲ್ಲಿ ಠಾಣೆಯ ನಾರಾಯಣಸ್ವಾಮಿ, ರಾಯಲ್ಪಾಡು ಠಾಣೆಯ ಸದಾಶಿವಯ್ಯ ಇದ್ದರು. ಇನ್‌ಸ್ಪೆಕ್ಟರ್ ಎಂ.ಬಿ.ಗೊರವನಕೊಳ್ಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.