ADVERTISEMENT

ಕಟ್ಟಡ ತೆರವು ನಿಲ್ಲಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 4:04 IST
Last Updated 13 ಸೆಪ್ಟೆಂಬರ್ 2021, 4:04 IST
ಮಾಲೂರು ಮುಖ್ಯ ರಸ್ತೆಯ ಅಕ್ಕ ಪಕ್ಕದಲ್ಲಿರುವ ಕಟ್ಟಡ ಮಾಲೀಕರು ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಗೌಡ ಅವರಿಗೆ ಕಟ್ಟಡ ತೆರವುಗೊಳಿಸುವ ಕುರಿತು ಮಾಹಿತಿ ನೀಡಿದರು
ಮಾಲೂರು ಮುಖ್ಯ ರಸ್ತೆಯ ಅಕ್ಕ ಪಕ್ಕದಲ್ಲಿರುವ ಕಟ್ಟಡ ಮಾಲೀಕರು ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಗೌಡ ಅವರಿಗೆ ಕಟ್ಟಡ ತೆರವುಗೊಳಿಸುವ ಕುರಿತು ಮಾಹಿತಿ ನೀಡಿದರು   

ಮಾಲೂರು: ಪಟ್ಟಣ ಅಭಿವೃದ್ಧಿಯಾಗಬೇಕು. ಕಾನೂನಾತ್ಮಕ ವಾಗಿರುವ ಕಟ್ಟಡಗಳನ್ನು ಕೆಡವಿ ಅಭಿವೃದ್ಧಿ ಮಾಡಬೇಕಾಗಿಲ್ಲ ಎಂದು ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಗೌಡ ಅಭಿಪ್ರಾಯಪಟ್ಟರು.

ಭರಣಿ ಆಸ್ಪತ್ರೆ ಸಭಾಂಗಣದಲ್ಲಿ ಭಾನುವಾರ ಸಂಜೆ ಪಟ್ಟಣದ ಮುಖ್ಯ ರಸ್ತೆಯ ಸಮೀಪ ಇರುವ ಕಟ್ಟಡ ಮಾಲೀಕರು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.

ಪಟ್ಟಣದ ಹೊಸಕೋಟೆ, ಮಾಲೂರು ರಸ್ತೆಯ ಪಂಪ್‌ಹೌಸ್‌ನಿಂದ ರೈಲ್ವೆ ಮೇಲ್ಸೇತುವೆವರೆಗೆ ₹7 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭವಾಗಿದೆ. ಮುಖ್ಯ ರಸ್ತೆಯ ಮಧ್ಯ ಭಾಗದಿಂದ 15 ಮೀಟರ್ ರಸ್ತೆ ಅಗಲೀಕರಣ ಮಾಡಲು ಪುರಸಭೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆಯ ಅಕ್ಕ ಪಕ್ಕದಲ್ಲಿರುವ ಕಟ್ಟಡ ಮಾಲೀಕರು ಸಭೆ ನಡೆಸಿ ಮಾಜಿ ಶಾಸಕ ಕೆಎಸ್.ಮಂಜುನಾಥ್ ಗೌಡರ ಬಳಿ ಮನವಿ ಸಲ್ಲಿಸಿದರು.

ADVERTISEMENT

ಪುರಸಭೆ ಅಧಿಕಾರಿಗಳು ರಸ್ತೆ ಅಗಲೀಕರಣದ ನಿಖರ ಮಾಹಿತಿ ನೀಡುತ್ತಿಲ್ಲ.ಕಾನೂನಾತ್ಮಕವಾಗಿರುವ ಕಟ್ಟಡಗಳನ್ನು ರಸ್ತೆ ಅಗಲೀಕರಣ ಹೆಸರಿನಲ್ಲಿ ಕೆಡವಲು ಮುಂದಾಗಿದ್ದಾರೆ. ನಮಗೆ ನಷ್ಟ ಪರಿಹಾರ ಕೊಡಿಸಿ ಎಂದು ಒತ್ತಾಯಿಸಿದರು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಭೆ ನಡೆಸಿ ಚರ್ಚಿಸಬೇಕು ಎಂದರು.

ಜಿ.ಪಂ ಸದಸ್ಯ ಚಿನ್ನಸ್ವಾಮಿ ಗೌಡ, ವಕೀಲರ ಸಂಘದ ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ, ಪುರಸಭೆ ಸದಸ್ಯರಾದ ಎಂ.ವಿ.ವೇಮನ್ನ, ಮಾಜಿ ಸದಸ್ಯರಾದ ಆಲೂ ಮಂಜು, ಲಿಂಗೇಶ್, ಡಾ.ವಿನಾಯಕ ಪ್ರಭು, ಡಾ.ವಿಶ್ವನಾಥ್, ಗುಟ್ಟಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.