ADVERTISEMENT

ಕೆಜಿಎಫ್‌: ಡಿಸಿಸಿ ಬ್ಯಾಂಕ್‌ ಕರ್ಮಕಾಂಡದ ತನಿಖೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 5:22 IST
Last Updated 2 ಜೂನ್ 2022, 5:22 IST
ಮಾಲೂರು ಪಟ್ಟಣದ ಅರಳೇರಿ ರಸ್ತೆಯಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಕಚೇರಿಯನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಆರ್. ಹರೀಶ್ ಉದ್ಘಾಟಿಸಿದರು. ಉಪಾಧ್ಯಕ್ಷ ಆರ್. ಚಂದ್ರು, ಮುಖಂಡರಾದ ನಿತಿನ್ ಗೌಡ, ಅನು ಗೌಡ, ತಮಿಳರಸನ್, ಗಂಗಾಧರ ಶೆಟ್ಟಿ, ಸೈಯ್ಯದ್ ಮೀನಾಜ್ ಹಾಜರಿದ್ದರು
ಮಾಲೂರು ಪಟ್ಟಣದ ಅರಳೇರಿ ರಸ್ತೆಯಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಕಚೇರಿಯನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಆರ್. ಹರೀಶ್ ಉದ್ಘಾಟಿಸಿದರು. ಉಪಾಧ್ಯಕ್ಷ ಆರ್. ಚಂದ್ರು, ಮುಖಂಡರಾದ ನಿತಿನ್ ಗೌಡ, ಅನು ಗೌಡ, ತಮಿಳರಸನ್, ಗಂಗಾಧರ ಶೆಟ್ಟಿ, ಸೈಯ್ಯದ್ ಮೀನಾಜ್ ಹಾಜರಿದ್ದರು   

ಕೆಜಿಎಫ್‌: ‘ಡಿಸಿಸಿ ಬ್ಯಾಂಕ್‌ನ ಸಾಲ ಹಗರಣ ಮತ್ತು ಕರ್ಮಕಾಂಡಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಈ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತಂದಿದ್ದೇವೆ. ಈ ಬಗ್ಗೆ ತನಿಖೆ ಮಾಡಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು.

ನಗರ ಹೊರವಲಯದಲ್ಲಿ ಬುಧವಾರ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಡಿಸಿಸಿ ಬ್ಯಾಂಕ್‌ ಅನ್ನು ಸ್ವಂತ ಆಸ್ತಿ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸರಿಯಾದ ರೀತಿಯಲ್ಲಿ ಕ್ರಮಕೈಗೊಳ್ಳಲು ತೀರ್ಮಾನ ಮಾಡಿದ್ದೇವೆ. ಅದನ್ನು ಮಾಡಿಯೇ ತೀರುತ್ತೇವೆ ಎಂದು ಹೇಳಿದರು.

ADVERTISEMENT

ಪಠ್ಯಪುಸ್ತಕ ವಿವಾದ ಕುರಿತ ಮಾತನಾಡಿದ ಅವರು, ‘ಮುಖ್ಯಮಂತ್ರಿ ಅವರು ಶಿಕ್ಷಣ ಸಚಿವರಿಂದ ವರದಿ ಕೇಳಿದ್ದಾರೆ. ಅದು ಬಂದ ನಂತರ ಮಾತನಾಡುತ್ತೇನೆ’ ಎಂದರು.

ಖಾಸಗಿ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕರಾದ ಮಂಜುನಾಥ ಗೌಡ, ವರ್ತೂರು ಪ್ರಕಾಶ್‌, ವೈ. ಸಂಪಂಗಿ, ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ವೇಣುಗೋಪಾಲ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.