ADVERTISEMENT

ಪಂಚರತ್ನ ಯಾತ್ರೆ: ಕೋಲಾರ ಗ್ರಾಮಗಳಿಗೆ ಎಚ್‌ಡಿಕೆ ಭೇಟಿ, ಪೂರ್ಣಕುಂಭ ಸ್ವಾಗತ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 7:54 IST
Last Updated 21 ನವೆಂಬರ್ 2022, 7:54 IST
   

ಕೋಲಾರ: ಎಚ್‌.ಡಿ.ಕುಮಾರಸ್ವಾಮಿ ಸಾರಥ್ಯದ ಜೆಡಿಎಸ್‌ ಪಂಚರತ್ನ ರಥಯಾತ್ರೆಯು ಸೋಮವಾರ ಕೋಲಾರ ವಿಧಾನಸಭಾ ಕ್ಷೇತ್ರದ ವಕ್ಕಲೇರಿ ಪ್ರವೇಶಿಸಿತು.

ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿದರೆ, ಯುವಕರು ಹೂಮಳೆಗರೆದು ಕುಮಾರಸ್ವಾಮಿ ಅವರನ್ನು ಬರಮಾಡಿಕೊಂಡರು. ಸಾರ್ವಜನಿಕರನ್ನು ಅವರು ಉದ್ದೇಶಿಸಿ ಮಾತನಾಡಿದರು. ಆಂಜನೇಯ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ವಕ್ಕಲೇರಿ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟಿಸಿದರು.

ಭಾನುವಾರ ರಾತ್ರಿ ಅವರು ಮಾಲೂರು ತಾಲ್ಲೂಕಿನ ಶಿವಾರಪಟ್ಟಣದ ಶಾಲೆಯಲ್ಲಿ ಗ್ರಾಮವಾಸ್ತವ್ಯ ಹೂಡಿದ್ದರು. ರಾತ್ರಿ 12 ಗಂಟೆಯವರೆಗೆ ಜನರೊಂದಿಗೆ ಸಂವಾದ ನಡೆಸಿದರು.

ADVERTISEMENT

ಸೋಮವಾರ ಸೋಮೇನಹಳ್ಳಿ, ಚಿನ್ನಾಪುರ, ಶೆಟ್ಟಿಗಾನಹಳ್ಳಿ, ದಂಡಿಗನಹಳ್ಳಿ, ಮುದುವಟ್ಟಿ, ಕೋರಗೊಂಡಹಳ್ಳಿ, ಬಿಗ್ಲಿ ಹೊಸಹಳ್ಳಿ, ಛತ್ರಕೋಡಿಹಳ್ಳಿ, ಟೇಕಲ್‌ ಕ್ರಾಸ್‌ನಲ್ಲಿ ರಸ್ತೆಬದಿ ಸಭೆ ನಡೆಯಲಿದೆ.

ಊಟದ ವಿರಾಮದ ಬಳಿಕ ಬಂಗಾರಪೇಟೆ ವೃತ್ತದಲ್ಲಿ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ.

ಬಳಿಕ ಅರಹಳ್ಳಿ, ತಲಗುಂದ, ಚಲ್ಲಹಳ್ಳಿ, ನುಗ್ಗಲಾಪುರ, ಪೆಮ್ಮಶೆಟ್ಟಿಹಳ್ಳಿ, ಸೂಲೂರು, ಚೊಕ್ಕಾಪುರ, ಕೆಂದಟ್ಟಿಯಲ್ಲಿಯೂ ರಸ್ತೆಬದಿ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಸಂಜೆ ನರಸಾಪುರದಲ್ಲಿ, ರಾತ್ರಿ ವೇಮಗಲ್‌ನಲ್ಲಿ ಸಾರ್ವಜನಿಕ ಸಭೆ ಆಯೋಜಿಸಲಾಗಿದೆ.

ಸಂಜೆ ಸೀತಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಕ್ಯಾಲನೂರಿನಲ್ಲಿ ರಾತ್ರಿ 10.30ಕ್ಕೆ ಗ್ರಾಮ ವಾಸ್ತವ್ಯ ನಡೆಸಿ ಜನರೊಂದಿಗೆ ಸಂವಾದ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.