ADVERTISEMENT

ಕೋಲಾರ: ಕೆ.ಸಿ.ರೆಡ್ಡಿ ಪ್ರತಿಮೆ ನಿರ್ಮಾಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 6:54 IST
Last Updated 14 ಡಿಸೆಂಬರ್ 2025, 6:54 IST
<div class="paragraphs"><p>&nbsp;ಪ್ರಾತಿನಿಧಿಕ ಚಿತ್ರ</p></div>

 ಪ್ರಾತಿನಿಧಿಕ ಚಿತ್ರ

   

ಕೋಲಾರ: ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ತವರೂರಿನಲ್ಲಿ ಅವರ ಪುತ್ಥಳಿ ನಿರ್ಮಾಣ ಮಾಡದಿರುವುದು ಬೇಸರ ತಂದಿದೆ ಎಂದು ರಾಜ್ಯ ರೆಡ್ಡಿ ಸಮುದಾಯದ ಮುಖಂಡರು ಬೇಸರ ವ್ಯಕ್ತಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಜಿಲ್ಲಾ ರೆಡ್ಡಿ ಸಮುದಾಯದ ನೂತನ ಪದಾಧಿಕಾರಿಗಳನ್ನು ಆಯ್ಕೆ ನಂತರ ಮಾತನಾಡಿದರು.

ADVERTISEMENT

ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಮುತುವರ್ಜಿಯಿಂದ ವಿಜಯವಾಡ ಜಿಲ್ಲೆಯ ತೆನಾಲಿ ಗ್ರಾಮದಲ್ಲಿ ಕಂಚಿನ ಪ್ರತಿಮೆ ಸಿದ್ಧವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ನಿಗದಿ ಮಾಡಿ ಶೀಘ್ರವಾಗಿ ಪುತ್ಥಳಿ ಅನಾವರಣಗೊಳಿಸಬೇಕು ಎಂದು ಆಗ್ರಹಿಸಿದರು.

ನೂತನ ಪದಾಧಿಕಾರಿಗಳು

ಜಿಲ್ಲಾ ರೆಡ್ಡಿ ಸಮುದಾಯ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಎಸ್.ಕೃಷ್ಣಾರೆಡ್ಡಿ, ಗೌರವಾಧ್ಯಕ್ಷರಾಗಿ ವಿಜಯರಾಘವರೆಡ್ಡಿ, ಮಹಿಳಾ ಜಿಲ್ಲಾ ಅಧ್ಯಕ್ಷರಾಗಿ ಶಾಂತಮ್ಮ, ಉಪಾಧ್ಯಕ್ಷರಾಗಿ ಸುಬ್ರಮಣಿರೆಡ್ಡಿ, ಶ್ರೀರಾಮರೆಡ್ಡಿ, ರಾಮಚಂದ್ರರೆಡ್ಡಿ, ಕೋಲಾರ ತಾಲೂಕು ಅಧ್ಯಕ್ಷಾಗಿ ಅನಿಲ್ ರೆಡ್ಡಿ, ಮಾಲೂರು ಅಧ್ಯಕ್ಷರಾಗಿ ಎ ರಾಮಸ್ವಾಮಿರೆಡ್ಡಿ, ಬಂಗಾರಪೇಟೆ ಅಧ್ಯಕ್ಷರಾಗಿ ತಿಪ್ಪಾರೆಡ್ಡಿ, ಕೆಜಿಎಫ್ ಅಧ್ಯಕ್ಷರಾಗಿ ವಿ.ಪ್ರಸನ್ನರೆಡ್ಡಿ, ಮುಳಬಾಗಿಲು ಅಧ್ಯಕ್ಷರಾಗಿ ಕೆ.ಎಂ.ಕೇಶವರೆಡ್ಡಿ ಹಾಗೂ ಶ್ರೀನಿವಾಸಪುರ ಅಧ್ಯಕ್ಷರಾಗಿ ರಾಜರೆಡ್ಡಿಯರನ್ನು ಆಯ್ಕೆ ಮಾಡಲಾಯಿತು.

ರಾಜ್ಯ ರೆಡ್ಡಿ ಜನಾಂಗದ ಸಂಘಟನಾ ಅಧ್ಯಕ್ಷ ಪ್ರಭಾಕರ್ ರೆಡ್ಡಿ, ರಾಜ್ಯ ರೆಡ್ಡಿ ಜನಾಂಗದ ನಿರ್ದೇಶಕರಾದ ರವೀಂದ್ರರೆಡ್ಡಿ, ಶಾಂತರಾಜರೆಡ್ಡಿ, ಸುರೇಶರೆಡ್ಡಿ ಹಾಗೂ ಜನಾಂಗದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.