ADVERTISEMENT

ಕೆಜಿಎಫ್‌ | ಬಿಜಿಎಂಎಲ್‌ಗೆ ಸೇರಿದ ಗಣಿಯಲ್ಲಿ ಮೃತಪಟ್ಟ ವ್ಯಕ್ತಿ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 16 ಮೇ 2020, 16:59 IST
Last Updated 16 ಮೇ 2020, 16:59 IST
ಶ್ರೀನಿವಾಸಪುರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೊಡುವ ಸುಜ್ಞಾನ ನಿಧಿ ಶಿಷ್ಯ ವೇತನವನ್ನು ಪೊಲೀಸ್‌ ಸರ್ಕಲ್‌ ಇನ್‌ಸ್ಪೆಕ್ಟರ್‌ ರಾಘವೇಂದ್ರ ಪ್ರಕಾಶ್ ವಿತರಿಸಿದರು
ಶ್ರೀನಿವಾಸಪುರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೊಡುವ ಸುಜ್ಞಾನ ನಿಧಿ ಶಿಷ್ಯ ವೇತನವನ್ನು ಪೊಲೀಸ್‌ ಸರ್ಕಲ್‌ ಇನ್‌ಸ್ಪೆಕ್ಟರ್‌ ರಾಘವೇಂದ್ರ ಪ್ರಕಾಶ್ ವಿತರಿಸಿದರು   

ಕೆಜಿಎಫ್‌: ಬಿಜಿಎಂಎಲ್‌ಗೆ ಸೇರಿದ ಗಣಿಯಲ್ಲಿ ಇಳಿಯಲು ಹೋಗಿ ಮೃತಪಟ್ಟ ಮತ್ತೊಬ್ಬರ ಶವ ಶನಿವಾರ ಪತ್ತೆಯಾಗಿದೆ. ಆದರೆ ಮೃತದೇಹವನ್ನು ಹೊರತೆಗೆಯಲು ಅಗ್ನಿಶಾಮಕದಳ ಕೈ ಚೆಲ್ಲಿದೆ.

ಚಿನ್ನ ಮಿಶ್ರಿತ ಮಣ್ಣನ್ನು ಕದಿಯಲು ಬುಧವಾರ ರಾತ್ರಿ ತಂಡವೊಂದು ಗಣಿಯೊಳಗೆ ಇಳಿದಿತ್ತು. ಆಗ ಮೂವರು ಉಸಿರುಕಟ್ಟಿ ಮೃತಪಟ್ಟಿದ್ದರು. ಅವರ ಪೈಕಿ ಇಬ್ಬರ ಶವವನ್ನು ಹೊರತೆಗೆಯಲಾಗಿತ್ತು. ಪಡಿಯಪ್ಪ ಎಂಬುವವರ ಶವ ಗಣಿಯೊಳಗೆ ಸಿಕ್ಕಿ ಹಾಕಿಕೊಂಡಿತ್ತು.

ಗಣಿಯ ಸುಮಾರು 90 ಅಡಿ ಆಳದಲ್ಲಿ ಮೃತದೇಹ ಪತ್ತೆಯಾಗಿದೆ. ಶವದಿಂದ ದುರ್ವಾಸನೆ ಬರುತ್ತಿದೆ. ಗಣಿಯೊಳಗೆ ಕೇವಲ ಹನ್ನೊಂದು ಅಡಿವರೆಗೆ ಮಾತ್ರ ಶುದ್ಧ ಗಾಳಿ ಸಿಗುತ್ತಿದೆ. ನಂತರ ವಿಷಾನಿಲ ತುಂಬಿದೆ. ಇದರಿಂದಾಗಿ ಅರ್ಧ ಗಂಟೆ ಕೆಲಸ ಮಾಡುವ ಆಕ್ಸಿಜನ್‌ ಸಿಲಿಂಡರ್‌ ಧರಿಸಿ ಗಣಿಯೊಳಗೆ ಇಳಿದು ದೇಹವನ್ನು ಹೊರತೆಗೆಯಲು ಅಗ್ನಿಶಾಮಕದಳ ಸಿಬ್ಬಂದಿ ಹಿಂದೆಜ್ಜೆ ಇಟ್ಟಿದ್ದಾರೆ.

ADVERTISEMENT

ಶವವನ್ನು ಹೊರತೆಗೆಯುವ ಅನಿವಾರ್ಯತೆ ಈಗ ಗಣಿ ಅಧಿಕಾರಿಗಳ ಮೇಲೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.