
ಕೆಜಿಎಫ್: ನಗರದಲ್ಲಿ ಅಕ್ರಮ ಸಿಲಿಂಡರ್ ರೀಫಿಲ್ ಮಾಡುತ್ತಿದ್ದ ವ್ಯಾಪಾರಿಯೊಬ್ಬನನ್ನು ರಾಬರ್ಟಸನ್‌ಪೇಟೆ ಪೊಲೀಸರು ಮತ್ತು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಶುಕ್ರವಾರ ಬಂಧಿಸಿದ್ದಾರೆ.
ರಾಬರ್ಟಸನ್‌ಪೇಟೆಯ ನೌಷದ್ ಪಾಷ (45) ಬಂಧಿತ ಆರೋಪಿ. ದಾಳಿ ವೇಳೆ ಗ್ಯಾಸ್ ಮರುಭರ್ತಿ ಮಾಡುವ ಕೊಳವೆ, ತೂಕದ ಯಂತ್ರ, 12 ಕೆ.ಜಿ.ಯ ಎರಡು ಇಂಡೋ ಗ್ಯಾಸ್ ಸಿಲಿಂಡರ್, 5 ಕೆ.ಜಿ ತೂಕದ ಇಂಡೇನ್ ಕಂಪನಿಯ ಖಾಲಿ ಸಿಲಿಂಡರ್ ಮತ್ತು ಎರಡು ಕೆ.ಜಿ ಸಾಮರ್ಥ್ಯದ ಸಿಲಿಂಡರ್‌ನ್ನು ವಶ ಪಡಿಸಿಕೊಳ್ಳಲಾಗಿದೆ.
ಆರೋಪಿಯು ಎಂ.ಐ.ನೌಷದ್ ಎಂಟರ್ ಪ್ರೈಸಸ್ ಅಂಗಡಿಯಲ್ಲಿ ಅಕ್ರಮವಾಗಿ ಸಿಲಿಂಡರ್ ರೀಫಿಲ್ ಮಾಡುತ್ತಿದ್ದಾರೆ ಎಂಬ ಮಾಹಿತಿ ಪಡೆದ ರಾಬರ್ಟಸನ್‌ಪೇಟೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಮಹೇಶ್ ಮಾಲಿ ಮತ್ತು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆರೋಗ್ಯ ನಿರೀಕ್ಷಕ ರಘು ಜಂಟಿಯಾಗಿ ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.
ಪೊಲೀಸ್ ಎಎಸ್‌ಐ ರಾಮಪ್ಪ, ಸಿಬ್ಬಂದಿಗಳಾದ ಗೋಪಾಲಕೃಷ್ಣ, ವಿಶ್ವನಾಥ್, ವೆಂಕಟಾಚಲಪತಿ, ಪವನ್‌ಕುಮಾರ್, ತಿಪ್ಪೇಸ್ವಾಮಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.