ಕಡತ
(ಸಾಂದರ್ಭಿಕ ಚಿತ್ರ)
ಕೆಜಿಎಫ್: ಮಾರಿಕುಪ್ಪಂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣಪ್ಪ ಅವರ ಜಾತಿ ಪ್ರಮಾಣಪತ್ರವನ್ನು ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ರದ್ದುಗೊಳಿಸಿ, ಆದೇಶ ಹೊರಡಿಸಲಾಗಿದೆ.
ಕೃಷ್ಣಪ್ಪ ಅವರು ನಾಯ್ಡು ಜನಾಂಗಕ್ಕೆ ಸೇರಿದ್ದು, ‘ನಾಯಕ’ ಎಂಬ ಜಾತಿ ಪ್ರಮಾಣ ಪತ್ರ ಪಡೆದಿದ್ದರು ಎಂಬ ಆರೋಪವಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಸಮಿತಿಯು, ಅವರು ಪಡೆದಿದ್ದ ‘ನಾಯಕ’ ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸಿದೆ.
ಹೂಹಳ್ಳಿ ಪ್ರಕಾಶ್ ಮತ್ತು ಗೊಲ್ಲಹಳ್ಳಿ ವೆಂಕಟೇಶಗೌಡ ಎಂಬುವರು ಈ ಕುರಿತು ಸಮಿತಿಗೆ ದೂರು ಸಲ್ಲಿಸಿದ್ದರು. ಕೃಷ್ಣಪ್ಪ ಅವರು ಮೂಲತಃ ನಾಯ್ಡು ಸಮುದಾಯಕ್ಕೆ ಸೇರಿದ್ದು, ಸರ್ಕಾರದ ಸೌಲಭ್ಯ ಪಡೆಯಲು ಎಸ್‌ಟಿ ಪ್ರಮಾಣ ಪತ್ರ ಪಡೆದಿದ್ದಾರೆ. ಎಸ್‌ಟಿ ಕೋಟಾದ ಅಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೂಡ ಆಗಿ ಆಯ್ಕೆಯಾಗಿದ್ದರು. ಈ ಪ್ರಕಾರ ಕೃಷ್ಣಪ್ಪ ಅವರು ಓದಿದ ಗೋಣಮಾಕನಹಳ್ಳಿ ಶಾಲೆ ದಾಖಲೆ ಮತ್ತು ಸರ್ಕಾರಿ ಪಿಯು ಕಾಲೇಜಿನ ದಾಖಲೆ ಪರಿಶೀಲಿಸಲಾಗಿದ್ದು, ಈ ಪ್ರಕಾರ ಅವರ ಜಾತಿ ಕಲಾಂನಲ್ಲಿ ನಾಯ್ಡು ಎಂದು ನಮೂದಾಗಿರುವುದು ಸಮಿತಿಯ ತನಿಖೆಯಲ್ಲಿ ದೃಢಪಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.