ADVERTISEMENT

ಕೆಜಿಎಫ್‌ | ರಾಜಕಾಲುವೆ ದುರಸ್ತಿ: ಸ್ಥಳ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 6:36 IST
Last Updated 7 ಜುಲೈ 2025, 6:36 IST
ಕೆಜಿಎಫ್‌ ಊರಿಗಾಂ ಪೇಟೆ ಬಳಿ ನಿರ್ಮಾಣವಾಗುತ್ತಿರುವ ರಾಜಕಾಲುವೆ ದುರಸ್ತಿಯನ್ನು ಶಾಸಕಿ ಎಂ.ರೂಪಕಲಾ ಶನಿವಾರ ವೀಕ್ಷಿಸಿದರು. ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ಆಯುಕ್ತ ಮಂಜುನಾಥ್‌ ಇದ್ದರು.
ಕೆಜಿಎಫ್‌ ಊರಿಗಾಂ ಪೇಟೆ ಬಳಿ ನಿರ್ಮಾಣವಾಗುತ್ತಿರುವ ರಾಜಕಾಲುವೆ ದುರಸ್ತಿಯನ್ನು ಶಾಸಕಿ ಎಂ.ರೂಪಕಲಾ ಶನಿವಾರ ವೀಕ್ಷಿಸಿದರು. ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ಆಯುಕ್ತ ಮಂಜುನಾಥ್‌ ಇದ್ದರು.   

ಕೆಜಿಎಫ್‌: ಮಳೆಗಾಲದಲ್ಲಿ ದಿಗುವರಾಗಡಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿಗೆ ತೊಂದರೆ ಆಗುವ ರಾಜಕಾಲುವೆಯ ಕಾಮಗಾರಿ ದುರಸ್ಥಿಯನ್ನು ಶಾಸಕಿ ಎಂ.ರೂಪಕಲಾ ಶನಿವಾರ ವೀಕ್ಷಿಸಿದರು.

ಊರಿಗಾಂಪೇಟೆಯ ಸ್ಮಶಾನದ ಬಳಿಯಿಂದ ದಿಗುವರಾಗಡಹಳ್ಳಿ ಮೂಲಕ ಸಮೀಪದ ಕೆರೆಗೆಳಿಗೆ ಹಾದು ಹೋಗುತ್ತಿದ್ದ ರಾಜಕಾಲುವೆ ಇತ್ತೀಚಿನ ದಿನಗಳಲ್ಲಿ ಒತ್ತುವರಿಯಾಗಿತ್ತು. ಮಳೆಯ ನೀರು ಮತ್ತು ಅದರೊಳಗೆ ಮಿಶ್ರವಾದ ತ್ಯಾಜ್ಯ ನೀರು ರೈತರ ಜಮೀನಿಗೆ ನುಗ್ಗುತ್ತಿತ್ತು. ಈ ಹಿನ್ನೆಲೆಯಲ್ಲಿ ದಿಗುರವರಾಗಡಹಳ್ಳಿ ಮತ್ತು ಸುತ್ತಮುತ್ತ ಜಮೀನುಳ್ಳ ರೈತರು ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ನಗರಸಭೆ ವತಿಯಿಂದ ರಾಜಕಾಲುವೆ ನಿರ್ಮಾಣ ಮಾಡಲಾಗುತ್ತಿದೆ. ಸ್ಥಳಕ್ಕೆ ಭೇಟಿ ನೀಡಿದ ಶಾಸಕಿಗೆ ನಗರಸಭೆ ಆಯುಕ್ತ ಮಂಜುನಾಥ್‌ ಮಾಹಿತಿ ನೀಡಿದರು. ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ಸ್ಥಾಯಿ ಸಮಿತಿ ಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ, ನಗರಸಭೆ ಸದಸ್ಯ ಕರುಣಾಕರನ್‌ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.