ಬಂಗಾರಪೇಟೆ: ‘ಕೋಚಿಮುಲ್‌ನಲ್ಲಿ ನಡೆದ ಕೋಟ್ಯಂತರ ರೂಪಾಯಿ ಅಕ್ರಮಗಳನ್ನು ಬಯಲಿಗೆ ಎಳೆದು ಅವರ ಬಂಡವಾಳ ಬಿಚ್ಚಿಡುತ್ತೇನೆ ಎಂಬ ಕಾರಣಕ್ಕೆ ಸ್ವಪಕ್ಷೀಯರು ಹಾಗೂ ವಿರೋಧ ಪಕ್ಷದವರು ಒಟ್ಟಿಗೆ ಸೇರಿ ಕೋಮುಲ್ ಚುನಾವಣೆಗೆ ಸ್ಪರ್ಧಿಸದಂತೆ ನನ್ನ ವಿರುದ್ಧ ಪಿತೂರಿ ಮಾಡಿದರು’ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಆರೋಪಿಸಿದರು.
ಚಿನ್ನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾವೇರಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಾಮ ಸಭೆ ಉದ್ಘಾಟಿಸಿ ಮಾತನಾಡಿ, ‘ನತ್ತಬೆಲೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಪಡೆದ ಡೆಲಿಗೇಟ್ ವಿರುದ್ಧ ಕೆಲವರ ಕುಮ್ಮಕ್ಕಿನಿಂದ ಹುನ್ಕುಂದ ವೆಂಕಟೇಶ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅವರ ಮನವಿಯನ್ನು ನ್ಯಾಯಾಲಯವು ತಿರಸ್ಕಾರ ಮಾಡಿದೆ. ಈ ಮೂಲಕ ಸತ್ಯಕ್ಕೆ ಜಯ ಸಿಕ್ಕಿದೆ’ ಎಂದು ಹೇಳಿದರು.
ಕೋಮಲ್ ಚುನಾವಣೆಗೆ ತಾಲ್ಲೂಕಿನಿಂದ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದೇನೆ. ತಾಲ್ಲೂಕಿನ ಹಾಲು ಉತ್ಪಾದಕರು ಎಲ್ಲವನ್ನು ಗಮನಿಸುತ್ತಿದ್ದಾರೆ. ತಮ್ಮ ಪರವಾಗಿ ಕೆಲಸ ಮಾಡುವವರಿಗೆ ಗೆಲ್ಲಿಸುತ್ತಾರೆ ಎಂದರು.
ಸಭೆಯಲ್ಲಿ ಇಒ ರವಿಕುಮಾರ್, ಬಿಇಒ ಜಿ. ಗುರುಮೂರ್ತಿ, ಸಿಡಿಪಿಒ ಮುನಿರಾಜು, ಎಇಇ ರವಾ ಕುಮಾರ್, ರವಿಚಂದ್ರ, ಸೂರ್ಯ ಪ್ರಸಾದ್, ಯುವರಾಜ್, ಶ್ರೀನಿವಾಸ್, ಕೆ. ಚಂದ್ರಾರೆಡ್ಡಿ, ಅಂಬರೀಶ್, ಸುನಂದಮ್ಮ, ವಿವೇಕ್ ಕುಮಾರ್, ಪಿಡಿಒ ಚಂದ್ರಪ್ಪ, ಸದಸ್ಯ ಲಕ್ಷ್ಮಯ್ಯ, ವರದರಾಜು, ಸುಬ್ರಮಣಿ, ಅಶೋಕ್, ಹರೀಶ್, ರಾಮೇಗೌಡ, ಪ್ರಿನ್ಸಿ ಸೆಲ್ವ ಕುಮಾರಿ, ಲಾರೋಂಜೊ, ನಾರಾಯಣಸ್ವಾಮಿ, ಮುನಿಲಕ್ಷ್ಮಮ್ಮ, ವರಲಕ್ಷ್ಮಿ, ಕವಿತ, ಶ್ರೀನಿವಾಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.