ADVERTISEMENT

ಕೋಲಾರ | ಪಿತೃಪಕ್ಷ ಪೂಜೆ ವೇಳೆ ಹೆಜ್ಜೇನು ದಾಳಿ: ವ್ಯಕ್ತಿ ಸಾವು

ಸಮಾಧಿಗೆ ಪೂಜೆ ಸಲ್ಲಿಸುವ ವೇಳೆ ಘಟನೆ–ಐವರಿಗೆ ಗಂಭೀರ ಗಾಯ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 2:55 IST
Last Updated 2 ಅಕ್ಟೋಬರ್ 2024, 2:55 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಕೋಲಾರ: ತಾಲ್ಲೂಕಿನ ಜಂಗಾಲಹಳ್ಳಿ ಬಳಿ ಮಂಗಳವಾರ ಪಿತೃಪಕ್ಷ ಪೂಜೆ ವೇಳೆ ಹೆಜ್ಜೇನು ದಾಳಿಯಿಂದಾಗಿ ವ್ಯಕ್ತಿಯೊಬ್ಬರು ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ADVERTISEMENT

ಜಂಗಾಲಹಳ್ಳಿ ಗ್ರಾಮದ ವೆಂಕಟಸ್ವಾಮಿ (60) ಮೃತ ವ್ಯಕ್ತಿ. ಅದೇ ಗ್ರಾಮದ ಶಾಮಣ್ಣ, ಸುಂದರ್ ರಾಜ್, ಕಾರ್ತಿಕ್ ಹಾಗೂ ಮಾಲೂರು ತಾಲ್ಲೂಕು ನಿದರಮಂಗಲ ಗ್ರಾಮದ ಶ್ರೀನಿವಾಸ್, ವೆಂಕಟಗಿರಿಯಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ. ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಜಂಗಾಲಹಳ್ಳಿ ಹೊರವಲಯದಲ್ಲಿರುವ ಹಿರಿಯರ ಸಮಾಧಿಗೆ ಪೂಜೆ ಸಲ್ಲಿಸಲು ಕುಟುಂಬದ 8ರಿಂದ 10 ಮಂದಿ ಸೇರಿದ್ದರು. ಈ ವೇಳೆ ಸಾಂಬ್ರಾಣಿ ಹೊಗೆ ಅಧಿಕವಾಗಿದ್ದರಿಂದ ಹೆಜ್ಜೇನು ಹುಳಗಳು ಆವರಿಸಿಕೊಂಡಿವೆ.

ಇದರಿಂದ ತಪ್ಪಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ್ದಾರೆ. ಮಹಿಳೆಯರು ಸೀರೆಯಲ್ಲಿ ಮುಖ ಮುಚ್ಚಿಕೊಂಡು ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಂಡರೆ, ಪುರುಷರು ಸಿಕ್ಕಿಕೊಂಡರು.

ವೆಂಕಟಸ್ವಾಮಿ ಅವರಿಗೆ ಹೆಚ್ಚಿನ ಹುಳಗಳು ಕಚ್ಚಿದ್ದರಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟರು. ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನಿಸಲಾಯಿತು. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.