ಕೋಲಾರ: ಭಾರತೀಯ ಕಿಸಾನ್ ಸಂಘದ ಕೋಲಾರ ತಾಲ್ಲೂಕು ಅಧ್ಯಕ್ಷರಾಗಿ ನಡಪಹಳ್ಳಿ ಎನ್.ಕೃಷ್ಣಮೂರ್ತಿ, ಉಪಾಧ್ಯಕ್ಷರಾಗಿ ಚದುಮನಹಳ್ಳಿ ಎನ್.ಈಶ್ವರಪ್ಪ, ಕಾರ್ಯದರ್ಶಿಯಾಗಿ ಕುರುಬರಪೇಟೆ ಜಿ.ಗಂಗಾಧರ್ ಆಯ್ಕೆಯಾಗಿದ್ದಾರೆ.
ಸಹ ಕಾರ್ಯದರ್ಶಿಯಾಗಿ ಹೊನ್ನೇನಹಳ್ಳಿ ನಾರಾಯಣಸ್ವಾಮಿ, ಖಜಾಂಚಿಯಾಗಿ ನಡುಪಹಳ್ಳಿ ಎನ್. ಎಲ್ ಸೋಮಣ್ಣ, ಯುವ ಪ್ರಮುಖ್ ಆಗಿ ಜನ್ನಪ್ಪನಹಳ್ಳಿ ಸಿ.ಹನುಮೇಗೌಡ, ವಿದ್ಯುತ್ ಕ್ಷೇತ್ರದ ಪ್ರಮುಖ ಆಗಿ ಹೊಸಮಟ್ನನಹಳ್ಳಿ ಎಚ್.ಆರ್.ನಾರಾಯಣಸ್ವಾಮಿ ಅವರನ್ನು ಸಂಘದ ಜಿಲ್ಲಾಧ್ಯಕ್ಷ ಮನ್ನೇನಹಳ್ಳಿ ಕೆ.ರಘುನಾಥ್ ರೆಡ್ಡಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ನೇಮಕ ಮಾಡಲಾಗಿದೆ.
ಉಳಿದ 14 ಪದಾಧಿಕಾರಿಗಳನ್ನು ತಾಲ್ಲೂಕು ಸಮಿತಿ ಮುಂದಿನ ಸಭೆಯಲ್ಲಿ ಆಸಕ್ತ ರೈತರೊಂದಿಗೆ ಚರ್ಚಿಸಿ ನೇಮಕ ಮಾಡಿಕೊಳ್ಳಲು ಸೂಚನೆ ನೀಡಲಾಯಿತು.
‘ರೈತ ಕ್ಷೇತ್ರದಲ್ಲಿ ರೈತರಿಂದ, ರೈತರಿಗಾಗಿ, ರೈತರಿಗೋಸ್ಕರ ಕಾರ್ಯನಿರ್ವಹಿಸುತ್ತಿರುವ ಭಾರತದ ಅತಿ ದೊಡ್ಡ ರೈತ ಸಂಘಟನೆ ಭಾರತೀಯ ಕಿಸಾನ್ ಸಂಘ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮದ ಹಂತದಲ್ಲಿ ಸಾವಯವ ಕೃಷಿ, ಗೋಸಂರಕ್ಷಣೆ, ಜಲ ಸಂರಕ್ಷಣೆ, ಪರಿಸರ ಸಂರಕ್ಷಣೆ ಹಾಗೂ ವಿಷಮುಕ್ತ ಆಹಾರ ಉತ್ಪಾದನೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುತ್ತಿದೆ. ಜೊತೆಗೆ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವೈಜ್ಞಾನಿಕವಾಗಿ ಲಾಭದಾಯಕ ಬೆಲೆ ನೀಡಬೇಕೆಂಬ ಹಕ್ಕೊತ್ತಾಯದ ಹೋರಾಟ ಹಮ್ಮಿಕೊಂಡು ಬರುತ್ತಿದೆ. ರೈತ ಜಾಗೃತಿಯೊಂದಿಗೆ ರಾಷ್ಟ್ರ ಜಾಗೃತಿ ಮೂಡಿಸಬೇಕು’ ಎಂದು ಕಿಸಾನ್ ಸಂಘದ ದಕ್ಷಿಣ ಪ್ರಾಂತ ಸಂಘಟನಾ ಪ್ರಧಾನ ಕಾರ್ಯದರ್ಶಿ ಕಣಜೇನಹಳ್ಳಿ ಕೆ.ಎನ್.ನಾರಾಯಣಸ್ವಾಮಿ ಹೇಳಿದರು.
ದಕ್ಷಿಣ ಪ್ರಾಂತ ಉಪಾಧ್ಯಕ್ಷ ಎ.ಅಪ್ಪಾಜಿಗೌಡ, ಕಾರ್ಯಕಾರಿ ಸಮಿತಿ ಸದಸ್ಯ ಚದುಮನಹಳ್ಳಿ ಈ.ಸುಬ್ರಮಣಿ, ಜಿಲ್ಲಾ ಉಪಾಧ್ಯಕ್ಷ ಅರಹಳ್ಳಿ ಕೆ.ಜಿ.ಶ್ರೀನಿವಾಸ ಗೌಡ, ಜಿಲ್ಲಾ ಕಾರ್ಯದರ್ಶಿ ಕೆ.ಗೋಪಾಲರೆಡ್ಡಿ, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಉಗಣಿ ಆರ್.ನಾರಾಯಣಗೌಡ, ಸದಸ್ಯರಾದ ಸುಪ್ರೀಂ ಕೋರ್ಟ್ ವಕೀಲ ಕೋಲಾರದ ಪ್ರಜ್ವಲ್, ಶಿವನಾರಹಳ್ಳಿ ನಾರಾಯಣಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.