ಕೋಲಾರ: ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಶನಿವಾರ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮರ 600ನೇ ಜಯಂತಿ ಅಂಗವಾಗಿ ಪಲ್ಲಕ್ಕಿ ಮೆರವಣಿಗೆಗೆ ಸಮುದಾಯದ ಮುಖಂಡರು ಚಾಲನೆ ನೀಡಿದರು.
ಹೇಮರೆಡ್ಡಿ ಮಲ್ಲಮ್ಮ ನಮ್ಮ ಸಮುದಾಯಕ್ಕೆ ಆದರ್ಶವಾಗಿದ್ದಾರೆ ಎಂದು ರೆಡ್ಡಿ ಜನಸಂಘದ ಅಧ್ಯಕ್ಷ ಅನಿಲ್ ತಿಳಿಸಿದರು.
ರೆಡ್ಡಿ ಜನಸಂಘದ ಕಾರ್ಯದರ್ಶಿ ರಾಮಚಂದ್ರರೆಡ್ಡಿ ಮಾತನಾಡಿ, ಹೇಮರೆಡ್ಡಿ ಮಲ್ಲಮ್ಮ ಕುರಿತು ಜನಪದರು ಗೀತೆಗಳನ್ನು ಸೃಜಿಸಿ ಹಾಡಿದ್ದಾರೆ. ಸಂತ ಶಿಶುನಾಳ ಶರೀಪರು ಹೇಮರೆಡ್ಡಿ ಮಲ್ಲಮ್ಮ ಕುರಿತು ಹಾಡಿದ್ದಾರೆ, ಆಕೆಯ ಮಹಿಮೆಯನ್ನು ಮರೆಯಲಾಗದು, ಆ ಶಿವಶರಣೆ ಮಲ್ಲಮ್ಮ ರೆಡ್ಡಿ ಜನಾಂಗದ ಮನೆ ದೇವತೆಯಾಗಿದ್ದು, ನಾವು ಸದಾ ಆ ತಾಯಿಯ ಸ್ಮರಣೆ ಮಾಡುತ್ತೇವೆ ಎಂದರು.
ರೆಡ್ಡಿ ಜನಸಂಘದ ಪದಾಧಿಕಾರಿಗಳಾದ ತಿಪ್ಪಾರೆಡ್ಡಿ, ನಾರಾಯಣರೆಡ್ಡಿ, ರಾಘವೇಂದ್ರ, ರವೀಂದ್ರರೆಡ್ಡಿ, ಕೆಜಿಎಫ್ ನೌಕರರ ಸಂಘದ ಮಾಜಿ ಅಧ್ಯಕ್ಷ ರವಿರೆಡ್ಡಿ, ಶ್ರೀನಿವಾಸಪುರದ ರಾಜಾರೆಡ್ಡಿ, ಮುಳಬಾಗಿಲು ಕೇಶವರೆಡ್ಡಿ, ಕೆಜಿಎಫ್ ಪ್ರಸನ್ನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.