
ಕೋಲಾರ: ಪರಿಸರ ನಿಯಮ ಉಲ್ಲಂಘನೆ, ಲೋಪವೆಸಗಿರುವ ಸಂಬಂಧ ಜಿಲ್ಲೆಯ 8 ಕ್ರಷರ್‌ಗಳನ್ನು ಮುಚ್ಚಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಸೂಚನೆ ನೀಡಿದೆ ಎಂದು ದೂರುದಾರರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಡಿ.ಮುನೇಶ್ ಚಂಜಿಮಲೆ ಹಾಗೂ ನವೀನ್ ಕುಮಾರ್ ತಿಳಿಸಿದ್ದಾರೆ.
ಗಂಭೀರ ಪರಿಸರ ನಿಯಮ ಉಲ್ಲಂಘನೆ ಮಾಡುತ್ತಿರುವ ಕೆಲ ಕ್ರಷರ್‌ಗಳಿಗೆ ಮೂರು ತಿಂಗಳ ಅವಧಿ ನೀಡಲಾಗಿದೆ ಎಂದಿದ್ದಾರೆ.
ಮಾಲೂರು ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು 27 ಕ್ರಷರ್ ಘಟಕಗಳನ್ನು ಜಿಲ್ಲಾ ಪರಿಸರ ಅಧಿಕಾರಿಗಳ ವರದಿಯಲ್ಲಿ ಗಂಭೀರ ಪರಿಸರ ನಿಯಮ ಉಲ್ಲಂಘನೆ ಮಾಡಿರುವುದಾಗಿ ಉಲ್ಲೇಖಿಸಲಾಗಿತ್ತು. ಈ ವರದಿ ಆಧಾರದ ಮೇಲೆ ಹಿರಿಯ ಪರಿಸರ ಅಧಿಕಾರಿಗಳು (ಬೆಂಗಳೂರು ಪೂರ್ವ ವಲಯ) ವಿಚಾರಣೆ ನಡೆಸಿ ಕ್ರಮಕ್ಕೆ ಮಂಡಳಿಗೆ ಶಿಫಾರಸ್ಸು ಮಾಡಿದ್ದರು ಎಂದು ಹೇಳಿದ್ದಾರೆ.
27 ಘಟಕಗಳ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಿದ್ದರೂ ಮಂಡಳಿಯು ಕೇವಲ 8 ಕ್ರಷರ್‌ಗಳನ್ನು ಮಾತ್ರ ಮುಚ್ಚಲು ಜಿಲ್ಲಾ ಪರಿಸರ ಅಧಿಕಾರಿಗೆ ಸೂಚನೆ ನೀಡಿರುವುದು ಅನುಮಾನ ಮಾಡಿಸಿದೆ. ಕೆಲವು ಘಟಕಗಳ ವಿರುದ್ಧ ವಿಚಾರಣೆ ನಡೆದು ಆರು ತಿಂಗಳಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಎಲ್ಲಾ ಘಟಕಗಳ ವಿರುದ್ಧ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.