ADVERTISEMENT

ಕೋಲಾರ | ದ್ವಿತೀಯ ಪಿಯುಸಿ ಪರೀಕ್ಷೆ-2; ಕನ್ನಡ ಪರೀಕ್ಷೆ 115 ಮಂದಿ ಗೈರು

ದ್ವಿತೀಯ ಪಿಯುಸಿ ಪರೀಕ್ಷೆ-2; ಮೊದಲ ದಿನ ಸುಗಮ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2024, 14:13 IST
Last Updated 29 ಏಪ್ರಿಲ್ 2024, 14:13 IST

ಕೋಲಾರ: ಜಿಲ್ಲೆಯ ಆರು ಕೇಂದ್ರಗಳಲ್ಲಿ ಸೋಮವಾರ ಆರಂಭವಾದ ದ್ವಿತೀಯ ಪಿಯುಸಿ ಪರೀಕ್ಷೆ-2 ಯಶಸ್ವಿಯಾಗಿ ನಡೆದಿದ್ದು, ಪ್ರಥಮ ಭಾಷೆ ಕನ್ನಡ ವಿಷಯಕ್ಕೆ 115 ಮಂದಿ ಗೈರಾಗಿದ್ದರು.

ಈ ಪರೀಕ್ಷೆ 845 ಮಂದಿ ಹೆಸರು ನೋಂದಾಯಿಸಿದ್ದು, 730 ಮಂದಿ ಹಾಜರಾಗಿದ್ದರು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರಪ್ಪ ತಿಳಿಸಿದರು.

ಪ್ರತಿ ತಾಲ್ಲೂಕಿಗೆ ಒಂದರಂತೆ ಆರು ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಯಾವುದೇ ಗೊಂದಲ‌ ಉಂಟಾಗಿಲ್ಲ. ಎಲ್ಲೂ ಅವ್ಯವಹಾರಗಳು ನಡೆದ ಬಗ್ಗೆ ವರದಿಯಾಗಿಲ್ಲ ಎಂದರು.

ADVERTISEMENT

ಕೋಲಾರದ ಬಾಲಕರ ಸರ್ಕಾರಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಕನ್ನಡ ಭಾಷೆಗೆ 138 ಮಂದಿ ನೋಂದಾಯಿಸಿದ್ದು, 101 ಮಂದಿ ಹಾಜರಾಗಿದ್ದರು. ಶ್ರೀನಿವಾಪುರ ಬಾಲಕರ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ 84 ಮಂದಿ ನೋಂದಾಯಿಸಿದ್ದು, 77 ಮಂದಿ ಹಾಜರಾಗಿದ್ದರು. ಮುಳಬಾಗಿಲು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 100 ಮಂದಿ ಹೆಸರು ನೋಂದಾಯಿಸಿದ್ದು, 92 ಮಂದಿ ಹಾಜರಾಗಿದ್ದರು. ಮಾಲೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 137 ಮಂದಿ ನೋಂದಾಯಿಸಿದ್ದು, 109 ಮಂದಿ ಪರೀಕ್ಷೆ ಬರೆದರು.

ಬಂಗಾರಪೇಟೆ ಬಾಲಕಿಯರ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ 130 ಮಂದಿ ಹೆಸರು ನೋಂದಾಯಿಸಿದ್ದು, 116 ಮಂದಿ ಹಾಜರಾಗಿದ್ದರು. ಕೆಜಿಎಫ್ ಉರಿಗಾಂ ಪದವಿ ಪೂರ್ವ ಕಾಲೇಜಿನ ಕೇಂದ್ರದಲ್ಲಿ 256 ಮಂದಿ ಹೆಸರು ನೋಂದಾಯಿಸಿದ್ದು, 235 ಮಂದಿ ಪರೀಕ್ಷೆ ಬರೆದರು.

ಇದೇ ಮೊದಲ ಬಾರಿಗೆ ಪ್ರತಿ ಪರೀಕ್ಷಾ ಕೊಠಡಿಯಲ್ಲೂ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿದ್ದು ವೆಬ್ ಕಾಸ್ಟಿಂಗ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.