ADVERTISEMENT

ಹಾಲಿನ ದುಡ್ಡು ತಿಂದವರು ಉದ್ದಾರ ಆಗಲ್ಲ: ಚಂಜಿಮಲೆ ಬಿ.ರಮೇಶ್

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 7:04 IST
Last Updated 25 ಸೆಪ್ಟೆಂಬರ್ 2025, 7:04 IST
ಕೋಲಾರ ತಾಲ್ಲೂಕಿನ ಚಂಜಿಮಲೆ ಹಾಲು ಉತ್ಪಾದಕರ ಸಂಘದ ಸಭೆಯಲ್ಲಿ ಕೋಮುಲ್ ನಿರ್ದೇಶಕ ಚಂಜಿಮಲೆ ಬಿ.ರಮೇಶ್ ಮಾತನಾಡಿದರು
ಕೋಲಾರ ತಾಲ್ಲೂಕಿನ ಚಂಜಿಮಲೆ ಹಾಲು ಉತ್ಪಾದಕರ ಸಂಘದ ಸಭೆಯಲ್ಲಿ ಕೋಮುಲ್ ನಿರ್ದೇಶಕ ಚಂಜಿಮಲೆ ಬಿ.ರಮೇಶ್ ಮಾತನಾಡಿದರು    

ಕೋಲಾರ: ‘ಜಿಲ್ಲೆಯ ಬಹುತೇಕ ಜನರ ಜೀವನಾಧಾರ ಹೈನುಗಾರಿಕೆಯಾಗಿದ್ದು, ಮಹಿಳೆಯರು ಮತ್ತು ರೈತರ ಬೆವರು ಅಡಗಿದೆ. ಹಾಲಿನ ಹಣ ತಿಂದವರು ಯಾವುದೇ ಕಾರಣಕ್ಕೂ ಉದ್ದಾರ ಆಗಲ್ಲ’ ಎಂದು ಕೋಮುಲ್ ನಿರ್ದೇಶಕ ಚಂಜಿಮಲೆ ಬಿ.ರಮೇಶ್ ತಿಳಿಸಿದರು.

ತಾಲ್ಲೂಕಿನ ಚಂಜಿಮಲೆ ಹಾಲು ಉತ್ಪಾದಕರ ಸಹಕಾರ ಸಂಘದ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

‘ಹಾಲನ್ನು ಕಲಬೆರಕೆ ಮಾಡಬೇಡಿ. ಯಾವುದಾದರೂ ತಪ್ಪು ಕಂಡುಬಂದರೆ ಕೂಡಲೇ ಪ್ರಶ್ನೆ ಮಾಡಬೇಕು. ಹಾಲಿನ ದುಡ್ಡು ತಿಂದವರಿಗೆ ರೈತರು ಮಹಿಳೆಯರ ಶಾಪ ತಟ್ಟುತ್ತದೆ. ಹಾಲಿನ ದುಡ್ಡು ಯಾವುದೇ ಕಾರಣಕ್ಕೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು’ ಎಂದರು.

ADVERTISEMENT

ಚಂಜಿಮಲೆ ಡೇರಿಯಲ್ಲಿ ಈ ಸಾಲಿನಲ್ಲಿ ₹ 13 ಲಕ್ಷ ವ್ಯಾಪಾರ ಆಗಿದ್ದು, ಅದರಲ್ಲಿ ₹ 7.46 ಲಕ್ಷದಷ್ಟು ನಿವ್ವಳ ಲಾಭ ಬಂದಿದೆ ಎಂದು ಹೇಳಿದರು.

ನಿರ್ದೇಶಕ ಮುನೇಶ್ ಮಾತನಾಡಿ, ‘ಒಕ್ಕೂಟಕ್ಕೆ ಸಂಘಗಳು ಆಧಾರಸ್ಥಂಭವಾಗಿದೆ. ಯಾವುದೇ ಕಾರಣಕ್ಕೂ ಒಕ್ಕೂಟದಲ್ಲಿ ಹಣ ಪೋಲು ಆಗದಂತೆ ಚಂಜಿಮಲೆ ಡೇರಿಯಿಂದ ಪ್ರತಿನಿಧಿಸಿ ಆಯ್ಕೆಯಾದ ಕೋಮುಲ್ ನೂತನ ನಿರ್ದೇಶಕರು ಕ್ರಮ ವಹಿಸಬೇಕಾಗಿದೆ’ ಎಂದರು.

ಚಂಜಿಮಲೆ ಡೇರಿ ಉಪಾಧ್ಯಕ್ಷ ಎನ್.ಶ್ರೀರಾಮಪ್ಪ, ನಿರ್ದೇಶಕರಾದ ಇ ಚಂದ್ರಪ್ಪ, ನರಸಿಂಹಪ್ಪ, ಪ್ರಸನ್ನ, ಅಲ್ಲಾಭಕಾಷ್, ದೇವರಾಜ್, ರಾಜಪ್ಪ, ಪುಷ್ಪ, ಗೌರಮ್ಮ, ಮಾಜಿ ಅಧ್ಯಕ್ಷ ಗೋಪಾಲಕೃಷ್ಣ, ಕಾರ್ಯದರ್ಶಿ ಸಿ.ಎನ್ ಪಾಪಣ್ಣ, ಹಾಲು ಪರೀಕ್ಷಕ ಶ್ರೀನಿವಾಸಯ್ಯ, ಸಹಾಯಕ ಮೋಹನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.