ADVERTISEMENT

ವೇಮಗಲ್ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 6:27 IST
Last Updated 28 ಸೆಪ್ಟೆಂಬರ್ 2025, 6:27 IST
ಕೋಮುಲ್ ಅಧ್ಯಕ್ಷ ನಂಜೇಗೌಡ ಅವರು ವೇಮಗಲ್ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶ್ರೀನಿವಾಸ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಶಸ್ತಿ ವಿತರಿಸಿದರು
ಕೋಮುಲ್ ಅಧ್ಯಕ್ಷ ನಂಜೇಗೌಡ ಅವರು ವೇಮಗಲ್ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶ್ರೀನಿವಾಸ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಶಸ್ತಿ ವಿತರಿಸಿದರು   

ವೇಮಗಲ್: ಹೈನುಗಾರಿಕೆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮತ್ತು ಮಾದರಿ ಆಡಳಿತಕ್ಕಾಗಿ ವೇಮಗಲ್ ಹಾಲು ಉತ್ಪಾದಕರ ಸಹಕಾರ ಸಂಘ ಪ್ರತಿಷ್ಠಿತ ‘ಜಿಲ್ಲಾ ಮಟ್ಟದ ಅತ್ಯುತ್ತಮ ಸಹಕಾರ ಸಂಘ’ ಪ್ರಶಸ್ತಿಗೆ ಭಾಜನವಾಗಿದೆ.

ನಿರ್ದೇಶಕ ಚಂಜೆಮಲೆ ಬಿ.ರಮೇಶ್ ಮಾತನಾಡಿ, ವೇಮಗಲ್ ಹಾಲು ಉತ್ಪಾದಕ ಸಹಕಾರ ಸಂಘವು ಜಿಲ್ಲೆಗೆ ಪ್ರಥಮ ಸ್ಥಾನ ಬಂದಿರುವುದು ಸಂತಸ ತಂದಿದೆ ಎಂದರು. 

ಸಂಘದ ಅಧ್ಯಕ್ಷ ವಿ.ಎಂ ಶ್ರೀನಿವಾಸ್, ಗುಣಮಟ್ಟದ ಹಾಲು ಉತ್ಪಾದನೆಗೆ ಆದ್ಯತೆ ನೀಡಬೇಕಾಗಿದೆ ಎಂದರು. 

ADVERTISEMENT

ಸಂಘದ ವಿಸ್ತರಣಾಧಿಕಾರಿ ಸಮೀರ್ ಪಾಷ ಮಾತನಾಡಿ, ಸಂಘವು ಒಕ್ಕೂಟದಿಂದ ಬರುವ ಎಲ್ಲ ಸೌಲಭ್ಯಗಳನ್ನು ಪಾರದರ್ಶಕವಾಗಿ ರೈತರಿಗೆ ನೀಡುತ್ತಿದೆ. ಹಾಗಾಗಿ ಉತ್ತಮ ಸಂಘ ಪ್ರಶಸ್ತಿ ಪಡೆಯಲು ಸಾಧ್ಯವಾಗಿದೆ ಎಂದರು. 

ಸಂಘದ ಮುಖ್ಯ ನಿರ್ವಾಹಕ ಸಂಜಯ್ ಕುಮಾರ್, ಮುಂದಿನ ದಿನಗಳಲ್ಲಿ ಹಾಲು ಉತ್ಪಾದಕರಿಗೆ ಹಲವು ಸೌಲಭ್ಯ ಒದಗಿಸಲು ಸಂಘವು ಶ್ರಮಿಸಲಿದೆ ಎಂದರು.

ನಿರ್ದೇಶಕರಾದ ವಿ.ಎನ್ ವೆಂಕಟಾಚಲ, ರಾಜಗೋಪಾಲಯ್ಯ, ಅಶ್ವತಪ್ಪ, ತವಕಲ ಸಾಬ್, ಹರೀಶ್, ವಿಜಿ, ಶ್ರೀನಿವಾಸ್, ಪ್ರಕಾಶ್ ವಿ, ಮುರುಳಿ. ಕೆ, ನಾಗವೇಣಿ ಎಂ, ಸಾವಿತ್ರಮ್ಮ, ಸಂಜಯ್ ಕುಮಾರ್, ಕಾಂತರಾಜು, ಲಕ್ಷ್ಮೀದೇವಿ ,ನಾಗೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.