ADVERTISEMENT

ದೆಹಲಿ ಡೇರಿ ಸಮ್ಮೇಳನಕ್ಕೆ ತೆರಳಲಿರುವ ಕೋಮುಲ್‌ ನಿರ್ದೇಶಕರು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 7:57 IST
Last Updated 11 ಫೆಬ್ರುವರಿ 2026, 7:57 IST
   

ಕೋಲಾರ: ನವದೆಹಲಿಯಲ್ಲಿ ಫೆ.12ರಿಂದ 14ವರೆಗೆ ನಡೆಯಲಿರುವ ಮೂರು ದಿನಗಳ 52ನೇ ಡೇರಿ ಕೈಗಾರಿಕಾ ಸಮ್ಮೇಳನಕ್ಕೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಮುಲ್‌) ನಿರ್ದೇಶಕರು ಪಾಲ್ಗೊಳ್ಳಲಿದ್ದಾರೆ.

ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿರುವ ಈ ನಿರ್ದೇಶಕರ ಪ್ರತಿನಿಧಿ ಶುಲ್ಕ, ಪ್ರಯಾಣ ವೆಚ್ಚ ಮತ್ತು ಇತರ ವೆಚ್ಚಗಳನ್ನು ಒಕ್ಕೂಟದಿಂದಲೇ ಭರಿಸುತ್ತಿರುವುದು ಗೊತ್ತಾಗಿದೆ. ನೋಂದಣಿ ಶುಲ್ಕವೇ ತಲಾ ₹ 13,888 ಇದೆ. ಜೊತೆಗೆ ದೆಹಲಿ ಸುತ್ತಲಿನ ಸ್ಥಳಗಳನ್ನು ವೀಕ್ಷಿಸುವ ಯೋಜನೆ ಇದೆ. ಇದಕ್ಕೆಲ್ಲಾ ಅಂದಾಜು ₹ 20 ಲಕ್ಷ ಖರ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಸಮ್ಮೇಳನದಲ್ಲಿ ಹೈನೋದ್ಯಮ ತಜ್ಞರು, ವಿಜ್ಞಾನಿಗಳು, ಪ್ರಗತಿಪರ ರೈತರು ಭಾಗವಹಿಸುತ್ತಿದ್ದು, ಚರ್ಚೆ ಹಾಗೂ ಉಪನ್ಯಾಸಗಳು ನಡೆಯಲಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.