
ಮಾಲೂರು: ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದರೆ ದಲಿತ ಸಾಹಿತ್ಯ ಪರಿಷತ್ ದಲಿತರ ಪ್ರಾತಿನಿಧಿಕ ಸಂಸ್ಥೆ ಎಂದು ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಜಯಮಂಗಲ ಚಂದ್ರಶೇಖರ್ ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಶನಿವಾರ ತಾಲ್ಲೂಕಿನ ದಲಿತ ಸಾಹಿತ್ಯ ಪರಿಷತ್‌ಗೆ ನೂತನ ಕಾರ್ಯಕಾರಿ ಸಮಿತಿ ರಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸಭೆಯಲ್ಲಿ ದಸಾಪ ಮಾಲೂರು ತಾಲ್ಲೂಕು ಘಟಕಕ್ಕೆ ಅಧ್ಯಕ್ಷ ಸಿ.ಎಂ.ನಂಜುಂಡಪ್ಪ, ಗೌರವಾಧ್ಯಕ್ಷ ಲಕ್ಷ್ಮಣ್, ಉಪಾಧ್ಯಕ್ಷ ತಿಮ್ಮರಾಯಪ್ಪ, ಸಿ.ವೈ.ರಾಧಮ್ಮ, ಪ್ರಧಾನ ಕಾರ್ಯದರ್ಶಿ ಅಮಿತ್, ಖಜಾಂಚಿ ರಾಜೇನಹಳ್ಳಿ ಚಂದ್ರಶೇಖರ್, ಸಹ ಕಾರ್ಯದರ್ಶಿ ಬಂಡಹಟ್ಟಿ ನಾರಾಯಣಸ್ವಾಮಿ, ಸಾಂಸ್ಕೃತಿಕ ಕಾರ್ಯದರ್ಶಿ ಸರ್ವೇಶ್ ನಾಗೊಂಡಹಳ್ಳಿ, ಸಂಘಟನಾ ಕಾರ್ಯದರ್ಶಗಳಾಗಿ ಲಕ್ಕೂರು ವೆಂಕಟೇಶ್, ಪದ್ಮ, ವೀಣಾ, ರೂಪ, ಗೌರವ ಸಲಹೆಗಾರರಾಗಿ ಮಾಸ್ತಿ ಜಗನ್ನಾಥ್ ಆಯ್ಕೆಯಾದರು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಇಂಚರ ನಾರಾಯಣಸ್ವಾಮಿ ಸಾಹಿತಿಗಳಾದ ಕೆ.ಮುನಿಕೃಷ್ಣಪ್ಪ, ಪಿ.ಎಂ.ಕೃಷ್ಣಪ್ಪ, ದೊಡ್ಡಕಲ್ಲಳ್ಳಿ ನಾರಾಯಣಪ್ಪ, ಚಿನ್ನಯ್ಯ, ಲಕ್ಷ್ಮೀಪುರ ಜಿ ಶ್ರೀನಿವಾಸ್ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.